ಕುಂಬಳೆ: ಮುಜುಂಗಾವು ಶ್ರೀ ಭಾರತೀವಿದ್ಯಾಪೀಠದಲ್ಲಿ ಮೂರು ದಿನಗಳ ಪ್ರಾಥಮಿಕ ಹಂತದ ಯೋಗ ಮತ್ತು ಧ್ಯಾನ ಶಿಬಿರಕ್ಕೆ ಯೋಗಾಚಾರ್ಯ ಪುಂಡರೀಕಾಕ್ಷ ಆಚಾರ್ಯ ಬೆಳ್ಳೂರು ಇವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ದೀಪಪ್ರಜ್ವಲನೆಯ ಮೂಲಕ ವಿದ್ಯಾಲಯದ ಆಡಳಿತ ಸೇವಾಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಕಿದೂರು ಶಿಬಿರ ಉದ್ಘಾಟಿಸಿ ಮಾತನಾಡಿ, ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡಲು ಯೋಗ ಅತ್ಯಂತ ಪರಿಣಾಮಕಾರಿಯಾಗಿದೆ. ಇದನ್ನು ನಿತ್ಯವೂ ಮುಂದುವರಿಸಿದರೆ ವೈದ್ಯರಿಂದ ದೂರವಿರಬಹುದು ಎಂದರು.
ಯೋಗಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ, ಯೋಗ ಮತ್ತು ಧ್ಯಾನದ ಮಹತ್ವವನ್ನು ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ದರ್ಭೆಮಾರ್ಗ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.