ಕೀವ್: 'ಯುದ್ಧದ ಕುರಿತು ತಮ್ಮನ್ನು ಹೊರಗಿಟ್ಟು ಅಮೆರಿಕ ಮತ್ತು ರಷ್ಯಾ ಮಾತ್ರ ಚರ್ಚೆ ನಡೆಸುವುದು ತುಂಬಾ ಅಪಾಯಕಾರಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ಕದನ ವಿರಾಮ ಒಪ್ಪಂದ ರೂಪಿಸುವ ಮೊದಲು ಉಕ್ರೇನ್ ಮತ್ತು ಅಮೆರಿಕ ನಡುವೆ ಮತ್ತಷ್ಟು ಚರ್ಚೆಗಳು ನಡೆಯಬೇಕು ಎಂದಿದ್ದಾರೆ.
'ಯುದ್ಧಭೂಮಿಯಲ್ಲಿ ಸೋಲುಂಟಾಗುತ್ತಿರುವ ಸಂದರ್ಭದಲ್ಲಿ ರಷ್ಯಾ ಕದನ ವಿರಾಮಕ್ಕೆ ಮುಂದಾಗಿದೆ. ಇದರಲ್ಲಿ ಯಾವುದೇ ರಿಯಾಯಿತಿಯನ್ನು ಉಕ್ರೇನ್ ಬಯಸುವುದಿಲ್ಲ' ಎಂದು ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.
ರಷ್ಯಾದ ಇಂಧನ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ನಿರ್ಬಂಧಗಳ ಬೆದರಿಕೆಯೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಕದನ ವಿರಾಮದ ಚರ್ಚೆಗೆ ಕರೆತರಬಹುದು. ಇದರೊಂದಿಗೆ ಉಕ್ರೇನ್‌ಗೆ ನಿರಂತರ ಮಿಲಿಟರಿ ಬೆಂಬಲವನ್ನು ನೀಡಬಹುದು ಎಂದರು.