ಬದಿಯಡ್ಕ: ಕೊಲ್ಲಂಗಾನ ಸಮೀಪದ ಪಜ್ಜದಲ್ಲಿ ಶಿಥಿಲಾವಸ್ಥೆಯಲ್ಲಿರುವ ಶ್ರೀಅಯ್ಯಪ್ಪ ಭಜನಾ ಮಂದಿರದ ಪುನರ್ ನಿರ್ಮಾಣ ಹಿನ್ನೆಲೆಯಲ್ಲಿ ಧಾರ್ಮಿಕ ಸಭೆ ಹಾಗೂ ನಿಧಿ ಸಂಚಯನ ಕಾರ್ಯಕ್ರಮ ಇಂದು(ಭಾನುವಾರ) ಬೆಳಿಗ್ಗೆ 10 ರಿಂದ ಪಜ್ಜ ಅಯ್ಯಪ್ಪ ಭಜನಾ ಮಂದಿರ ಪರಿಸರದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಶ್ರೀಮದ್.ಎಡನೀರು ಮಠಾಧೀಶರಾದ ಶ್ರೀ ಸಚ್ಛಿದಾನಂದ ಭಾರತೀ ಶ್ರೀಗಳು ದೀಪ ಬೆಳಗಿಸಿ ಉದ್ಘಾಟಿಸಿ ನಿಧಿ ಸಂಚಯನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡುವರು. ಭಜನಾ ಮಂದಿರ ಪುನರ್ ನಿರ್ಮಾಣ ಸಮಿತಿ ಗೌರವಾಧ್ಯಕ್ಷ, ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸುವರು. ಮಧೂರು ಗ್ರಾ.ಪಂ.ಅಧ್ಯಕ್ಷ ಗೋಪಾಲಕೃಷ್ಣ ಕೆ., ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ, ವೈದ್ಯ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ನಿವೃತ್ತ ಪೋಲೀಸ್ ವರಿಷ್ಠಾಧಿಕಾರಿ ಹರಿಶ್ಚಂದ್ರ ನಾಯ್ಕ್, ವಿದ್ಯುತ್ ಪ್ರಸರಣ ವಿಭಾಗದ ನಿರ್ದೇಶಕ ಸುರೇಂದ್ರನ್ ಕೆ., ಲೋಕೋಪಯೋಗಿ ಗುತ್ತಿಗೆದಾರ ವಾಸುದೇವ ಹೊಳ್ಳ ಮಧೂರು, ಲೆಕ್ಕ ಪರಿಶೋಧಕ ಗೋಪಾಲಕೃಷ್ಣ ಮೇಗಿನಡ್ಕ, ಉದ್ಯಮಿ ಸುಮಿತ್ರನ್ ಪಿ.ಪಿ., ಬದಿಯಡ್ಕ ಗ್ರಾ.ಪಂ.ಸದಸ್ಯ ಕೆ.ಶ್ಯಾಮ ಪ್ರಸಾದ್ ಮೇಗಿನಡ್ಕ, ನಿವೃತ್ತ ರೈಲ್ವೇ ಅಧಿಕಾರಿ ಐತ್ತಪ್ಪ ನಾಯ್ಕ ಮರ್ದಂಬೈಲು, ನಿವೃತ್ತ ಅಂಚೆ ನಿರೀಕ್ಷಕ ವಾಸುದೇವ ನಾವಡ ಬನ್ನೂರು, ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ ಪಿ.ವಿ., ಎಡಪರಂಬ ಶಾಲಾ ಮುಖ್ಯೋಪಾಧ್ಯಾಯ ಸದಾಶಿವ ಶರ್ಮ.ಪಿ., ನಿವೃತ್ತ ಕೃಷಿ ಅಧಿಕಾರಿ ರಮೇಶ್ ನಾಯ್ಕ, ಉದ್ಯಮಿ ರಾಮ.ಕೆ.ಮಾನ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಗುರುಸ್ವಾಮಿಗಳಾದ ಕುಂಞÂ್ಞ ಕಣ್ಣ ಚುಕ್ಕಿನಡ್ಕ, ದಾಮೋದರ ಪಾಂಬಾಚಿಕಡವು, ಕುಂಞ್ಞಪ್ಪ ನಾಯ್ಕ ಮಾನ್ಯ, ರಾಮ ಉದಯಗಿರಿ ಉಪಸ್ಥಿತರಿರುವರು. ಅಯ್ಯಪ್ಪ ಭಜನಾ ಮಂದಿರದ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ತಿರುಮಲೇಶ್ವರ ಭಟ್ ಪಜ್ಜ, ಕಾರ್ಯದರ್ಶಿ ವಾಮನ ನಾಯ್ಕ ಅರಂತೋಡು ಮೊದಲಾದವರು ನೇತೃತ್ವ ವಹಿಸುವರು.