HEALTH TIPS

ರನ್‌ವೇನಲ್ಲಿ ಪ್ರಯಾಣಿಕರ ವಿಮಾನಕ್ಕೆ ಅಡ್ಡಬಂದ ಖಾಸಗಿ ಜೆಟ್! ಕ್ಷಣಾರ್ಧದಲ್ಲಿ ಪಾರು

ಚಿಕಾಗೊ :ಪ್ರಯಾಣಿಕರ ವಿಮಾನವೊಂದು ಲ್ಯಾಂಡಿಂಗ್ ವೇಳೆ ರನ್‌ವೇನಲ್ಲಿ ಅಡ್ಡಬಂದ ಖಾಸಗಿ ಜೆಟ್ ವಿಮಾನಕ್ಕೆ ಡಿಕ್ಕಿಯಾಗುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಚಿಕಾಗೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಿಗ್ಗೆ 8.50 ರ ಸುಮಾರು ಈ ಘಟನೆ ನಡೆದಿದೆ.

ಸೌಥ್ ವೆಸ್ಟ್ ಏರ್‌ಲೈನ್ಸ್‌ನ ವಿಮಾನ-2504, ಚಿಕಾಗೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು. ಅದೇ ವೇಳೆ ರನ್‌ವೇಗೆ ಅನುಮತಿ ಇಲ್ಲದಿದ್ದರೂ ಖಾಸಗಿ ಜೆಟ್ ವಿಮಾನವೊಂದು ಅಡ್ಡ ಬಂದಿದೆ. ಕೂಡಲೇ ಕಂಟ್ರೂಲ್ ರೂಂನಿಂದ (ಎಟಿಸಿ) ಸೌಥ್ ವೆಸ್ಟ್ ಏರ್‌ಲೈನ್ಸ್‌ನ ವಿಮಾನದ ಪೈಲಟ್‌ಗೆ ತುರ್ತು ಸಂದೇಶ ಹೋಗಿದೆ. ಇದರಿಂದ ಪೈಲಟ್ ತಕ್ಷಣವೇ ವಿಮಾನವನ್ನು ಅದೇ ರನ್‌ವೇನಿಂದ ತಕ್ಷಣವೇ ಟೇಕ್ ಆಫ್ ಮಾಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೊ ಇಂಟರ್‌ನೆಟ್‌ನಲ್ಲಿ ಹಲವರ ಗಮನ ಸೆಳೆದಿದೆ. ಈ ವಿಮಾನದಲ್ಲಿ ಸಿಬ್ಬಂದಿಯೂ ಸೇರಿ 125 ಜನ ಇದ್ದರು ಎನ್ನಲಾಗಿದೆ.

ಟೇಕ್‌ ಆಫ್ ಅದ ನಂತರ ಸೌಥ್ ವೆಸ್ಟ್ ಏರ್‌ಲೈನ್ಸ್‌ ವಿಮಾನ ಚಿಕಾಗೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಪೈಲಟ್‌ನ ಸಮಯಪ್ರಜ್ಞೆ ಮತ್ತು ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಘಟನೆ ಬಗ್ಗೆ ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆಗೆ ಆದೇಶಿಸಿದೆ.

ಕಳೆದ ನವೆಂಬರ್‌ನಲ್ಲಿ ಜಪಾನ್‌ ಟೊಕಿಯೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಆಗ ಜೆಟ್ ವಿಮಾನಕ್ಕೆ ಪ್ರಯಾಣಿಕರ ವಿಮಾನ ಡಿಕ್ಕಿಯಾಗಿ ಜೆಟ್ ವಿಮಾನದಲ್ಲಿದ್ದ ಐವರು ಮೃತಪಟ್ಟಿದ್ದರು. ಆಶ್ಚರ್ಯಕರವಾಗಿ ಪ್ರಯಾಣಿಕರ ವಿಮಾನದಲ್ಲಿದ್ದ 175 ಜನ ಪಾರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries