ಪ್ಯಾರಿಸ್: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಜಂಟಿಯಾಗಿ ಬುಧವಾರ ಫ್ರಾನ್ಸ್‌ನ ಮಾರ್ಸೈಲ್ ನಗರದಲ್ಲಿ ನೂತನ ಭಾರತೀಯ ರಾಯಭಾರ ಕಚೇರಿಯನ್ನು ಉದ್ಘಾಟಿಸಿದರು.
ಈ ವೇಳೆ ನೆರೆದಿದ್ದ ಜನ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಭಾರತ ಮತ್ತು ಫ್ರಾನ್ಸ್ ಧ್ವಜವನ್ನು ಹಿಡಿದಿದ್ದರು. ಇನ್ನು ಕೆಲವರು ಭಾರತದ ಧ್ವಜದ ಬಣ್ಣವನ್ನು ಹಚ್ಚಿಕೊಂಡು ಬಂದಿದ್ದರು.
ಇದಕ್ಕೂ ಮುನ್ನ ಮೋದಿ ಮತ್ತು ಮ್ಯಾಕ್ರನ್ ಯುದ್ಧದಲ್ಲಿ ಮಡಿದ ಭಾರತೀಯ ಯೋಧರ ಸಮಾಧಿ ಇರುವ ಮಜಾರ್ಗಸ್ ಪ್ರದೇಶಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ಬಳಿಕ ಅಲ್ಲಿ ನೆರೆದಿದ್ದ ಜನರೊಂದಿಗೆ ಮಾತುಕತೆ ನಡೆಸಿದ್ದರು.
ಅಧ್ಯಕ್ಷ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಫ್ರಾನ್ಸ್‌ಗೆ ತೆರಳಿರುವ ಪ್ರಧಾನಿ ಮೋದಿ ಮಂಗಳವಾರ ಎಐ ಆಯಕ್ಷನ್ ಶೃಂಗದಲ್ಲಿ ಭಾಗವಹಿಸಿದ್ದರು.