ಕೀವ್: ಉಕ್ರೇನ್‌ನ ಇಂಧನ ಮತ್ತು ಅನಿಲ ಮೂಲಸೌಕರ್ಯಗಳನ್ನು ಗುರಿಯಾಗಿಸಿ ರಷ್ಯಾ ಪಡೆಗಳು ಕ್ಷಿಪಣಿ ದಾಳಿ ನಡೆಸಿವೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಪಡೆಗಳು ರಷ್ಯಾದ ತೈಲ ಸಂಸ್ಕರಣಾ ಘಟಕ ಗುರಿಯಾಗಿಸಿ ದಾಳಿ ನಡೆಸಿವೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ದಾಳಿಯಿಂದಾಗಿ ಇಂಧನ ಘಟಕವನ್ನು ಮುಚ್ಚಲಾಗಿದೆ. ಯುದ್ಧ ಆರಂಭವಾದಾಗಿನಿಂದಲೂ ಉಕ್ರೇನ್‌ನ ಇಂಧನ ಉತ್ಪಾದಕ ಘಟಕಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸುತ್ತಿದೆ ಎಂದು ಉಕ್ರೇನ್‌ನ ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಯೊಂದು ಹೇಳಿದೆ.
ಮತ್ತೊಂದೆಡೆ ಉಕ್ರೇನ್ ಗಡಿಯಿಂದ 500 ಕಿ.ಮೀ ದೂರದಲ್ಲಿರುವ ರಷ್ಯಾದ ಸರಟೊವ್ ಪ್ರಾಂತ್ಯದಲ್ಲಿರುವ ತೈಲ ಸಂಸ್ಕರಣಾ ಘಟಕವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ ಎಂದು ಸೇನಾಧಿಕಾರಿ ತಿಳಿಸಿದ್ದಾರೆ. ರಷ್ಯಾದ ಸೇನೆಗಾಗಿ ಗ್ಯಾಸೊಲಿನ್ (ಇಂಧನ), ತೈಲ ಮತ್ತು ಡೀಸೆಲ್ ಅನ್ನು ಈ ಘಟಕದಿಂದ ಪೂರೈಸಲಾಗುತ್ತಿತ್ತು ಎನ್ನಲಾಗಿದೆ.