ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳು, ಹೈಸ್ಕೂಲು ಹಾಗೂ ಹೈಯರ್ ಸೆಕೆಂಡರಿ ವಿಭಾಗಗಳಲ್ಲಿ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಅಧ್ಯಾಪಕರು ಮುಖ್ಯೋಪಾಧ್ಯಾಯರು ಅಧ್ಯಾಪಕೇತರ ಸಿಬ್ಬಂದಿ ವರ್ಗ ಮೊದಲಾದವರನ್ನು ಬೀಳ್ಕೊಡುವ ಸಮಾರಂಭ ಐಲ ಶ್ರೀ ಶಾರದಾ ಎ.ಯು.ಪಿ ಶಾಲೆಯಲ್ಲಿ ಇತ್ತೀಚೆಗೆ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಉಪಜಿಲ್ಲಾ ಶಿಕ್ಷಣಾಧಿಕಾರಿ ರಾಜಗೋಪಾಲ ಕೆ ವಹಿಸಿದ್ದರು. ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ವಿದ್ಯಾಭ್ಯಾಸ ಉಪನಿರ್ದೇಶಕ ಮಧುಸೂದನನ್ ಟಿ.ವಿ ಉದ್ಘಾಟಿಸಿ ಮಾತನಾಡಿದರು.
ಈ ಶೈಕ್ಷಣಿಕ ವರ್ಷ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ. ವಿ., ಉಪಜಿಲ್ಲಾವಿದ್ಯಾಧಿüಕಾರಿ ರಾಜಗೋಪಾಲ ಕೆ. ಅವÀರನ್ನು ಶಾಲು ಹೊದಿಸಿ ಪೇಟ ತೊಡಿಸಿ ಸ್ಮರಣಿಕೆ ನೀಡಿ ಜಿಲ್ಲಾ ವಿದ್ಯಾಭ್ಯಾಸ ಉಪನಿರ್ದೇಶಕ ಮಧುಸೂದನನ್ ಸನ್ಮಾನಿಸಿದರು. ಉಪಜಿಲ್ಲೆಯಿಂದ ಸುಮಾರು 29 ಮಂದಿ ನಿವೃತ್ತಿ ಹೊಂದುತ್ತಿರುವ ಅಧ್ಯಾಪಕ ಅಧ್ಯಾಪಿಕೆಯರು ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗದವರನ್ನು ಸ್ಮರಣಿಕೆ ಶಾಲು ಹೊದಿಸಿ ಪೇಟ ತೊಡಿಸಿ ನೆರೆದ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಎಚ್.ಎಂ ಫಾರಂ ಕಾರ್ಯದರ್ಶಿ ಶ್ಯಾಂ ಭಟ್ ಯು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಯಟ್ ಫಾಕಲ್ಟಿ ಮಧು, ಮೀಯಪದವು ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ರಮೇಶ್, ಬಿ.ಪಿ.ಸಿ ಜೋಯ್ ಜಿ., ಬಿ.ಆರ್.ಸಿ ಮಂಜೇಶ್ವರ ಉಪಜಿಲ್ಲಾ ಶಿಕ್ಷಣ ಕಛೇರಿಯ ಸೀನಿಯರ್ ಸುಪರಿಟೆಂಡೆಂಟ್ ಜಿತೇಂದ್ರ ಎಸ್.ಎಚ್., ಶ್ರೀ ಶಾರದಾ ಬೋವಿ ಎ.ಯು.ಪಿ ಶಾಲೆ ಮುಖ್ಯ ಶಿಕ್ಷಕಿ ಜಲಜಾಕ್ಷಿ ಎ., ವಿವಿಧ ಅಧ್ಯಾಪಕ ಸಂಘಟನಾ ಪ್ರತಿನಿಧಿಗಳಾದ ಒ..ಎಂ.ರಶೀದ್, ಅರವಿಂದಾಕ್ಷ ಭಂಡಾರಿ, ರವೀಂದ್ರ, ಶಾಹಿದ್, ಜಯರಾಮ, ದೇವಿಪ್ರಸಾದ್, ರಾಧಾಕೃಷ್ಣ ಶುಭಾಶಂಸನೆಗೈದು ಮಾತನಾಡಿದರು. ಸಂಘಟಕ ಸಮಿತಿ ಅಧ್ಯಕ್ಷÀ ಸುಕೇಶ ಎ. ಸ್ವಾಗತಿಸಿ, ಸತ್ಯಪ್ರಕಾಶ ಇ.ಕೆ. ವಂದಿಸಿದರು. ಮುಖ್ಯೋಪಾಧ್ಯಾಯ ಇಸ್ಮಾಯಿಲ್ ಮೀಯಪದವು ಹಾಗೂ ಉಣ್ಣಿಕೃಷ್ಣನ್ ಕಂದಲ್ ಕಾರ್ಯಕ್ರಮ ನಿರೂಪಿಸಿದರು.