ಕುಂಬಳೆ: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಕುಂಬಳೆ ವಲಯದ ನೇತೃತ್ವದಲ್ಲಿ ನಾಯಕತ್ವ ತರಬೇತಿ ಕುಂಬಳೆ ಪೈ ಕಾಂಪ್ಲೆಕ್ಸ್‍ನಲ್ಲಿ ಮಂಗಳವಾರ ಜರಗಿತು. ಎಕೆಪಿಎ ಕಾಸರಗೋಡು ಜಿಲ್ಲಾ ಅಧ್ಯಕ್ಷ ಸುಗುಣನ್ ಇರಿಯ ಉದ್ಘಾಟಿಸಿ ಮಾತನಾಡಿ, ನಾಯಕತ್ವ ಎಂಬ ಶಬ್ದಕ್ಕೆ ವಿಶೇಷ ಅರ್ಥವಿದೆ. ಓರ್ವ ನಾಯಕನಾದವನ ದೃಢವಾದ ನಿಲುವುಗಳು ಆತನ ಸಂಘಟನೆಯನ್ನು ಬಲಪಡಿಸುತ್ತದೆ. ಕೇವಲ ಪ್ರದರ್ಶನಕ್ಕೆ ಮಾತ್ರ ನಾಯಕನಾಗಿರಬಾರದು. ವಿವಿಧ ಸ್ವಭಾವಗಳ ಜನರನ್ನು ಒಂದುಗೂಡಿಸುವ ಸಾಮಥ್ರ್ಯ ಆತನಲ್ಲಿರಬೇಕು ಎಂದರು.
ಎಕೆಪಿಎ ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವನಿತಾ ವಿಂಗ್ ಸಂಚಾಲಕ ಪ್ರಶಾಂತ್ ತೈಕಡಪ್ಪುರಂ ನಾಯಕತ್ವ ತರಬೇತಿ ನಡೆಸಿಕೊಟ್ಟರು. ಜಿಲ್ಲಾ ಕಾರ್ಯದರ್ಶಿ ರಾಜೇಂದ್ರನ್ ಪಾಡಿ, ಕೋಶಾಧಿಕಾರಿ ಸುನಿಲ್ ಪಿ.ಟಿ., ಕುಂಬಳೆ ವಲಯ ಪ್ರಭಾರಿ ಸುಧೀರ್ ಕೆ.ಕೆ., ಜಿಲ್ಲಾ ಉಪಾಧ್ಯಕ್ಷ ವೇಣು ವಿ.ವಿ., ಕ್ರೀಡಾಸಂಚಾಲಕ ನಿತ್ಯಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಂಬಳೆ ವಲಯ ಕಾರ್ಯದರ್ಶಿ ಸುರೇಶ್ ಆಚಾರ್ಯ ಸ್ವಾಗತಿಸಿ, ಕೋಶಾಕಾರಿ ವೇಣುಗೋಪಾಲ ನೀರ್ಚಾಲು ವಂದಿಸಿದರು. ಬದಿಯಡ್ಕ ಘಟಕ ಕಾರ್ಯದರ್ಶಿ ನಾರಾಯಣ ಓಡಂಗಲ್ಲು ಪ್ರಾರ್ಥನೆ ಹಾಡಿದರು. ಇತ್ತೀಚೆಗೆ ನಿಧನರಾದ ಉಪ್ಪಳ ಘಟಕದ ಎಕೆಪಿಎ ಸದಸ್ಯ ಚಿದಾನಂದ ಅರಿಬೈಲು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.