ನವದೆಹಲಿ: ಅನುಭವಿ ಅಧಿಕಾರಿ ಹಾಗೂ ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಅವರನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಗುರುವಾರ ನೇಮಕ ಮಾಡಿದೆ.
ಒಡಿಶಾ ಕೇಡರ್‌ನ 1987ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಪಾಂಡೆ ಅವರು ಸೆಬಿಯ 11ನೇ ಮುಖ್ಯಸ್ಥರಾಗಲಿದ್ದಾರೆ.ಅವರ ಅಧಿಕಾರಾವಧಿ ಮೂರು ವರ್ಷ ಇರಲಿದೆ.
ಸೆಬಿ ಹಾಲಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರ ಅಧಿಕಾರಾವಧಿ ಶುಕ್ರವಾರ ಕೊನೆಗೊಳ್ಳಲಿದೆ.
ಸಂಪುಟದ ನೇಮಕಾತಿಗಳ ಸಮಿತಿಯು ಪಾಂಡೆ ಅವರ ಈ ನೇಮಕವನ್ನು ಅನುಮೋದಿಸಿದೆ ಎಂದು ಕೇಂದ್ರ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.