ಕೊಟ್ಟಾಯಂ: ಸರ್ಕಾರಿ ನರ್ಸಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಮೊದಲ ವರ್ಷದ ಆರು ವಿದ್ಯಾರ್ಥಿಗಳನ್ನು ತಿಂಗಳುಗಟ್ಟಲೆ ಅಮಾನುಷವಾಗಿ ರ್ರಾಗಿಂಗ್ ಮಾಡಿರುವ ದೃಶ್ಯಾವಳಿಗಳು ಹೊರಬಿದ್ದಿವೆ. ಫೂಟೇಜ್ ನಲ್ಲಿ ದೂರುದಾರರನ್ನು ಕಾಲೇಜು ಹಾಸ್ಟೆಲ್ ನಲ್ಲಿ ಕಟ್ಟಿಹಾಕಿ ಕಿರುಕುಳ ನೀಡಿರುವುದು ಭೀಭತ್ಸವಾಗಿವೆ. ಇಡೀ ದೇಹವನ್ನು ಕ್ಯವಾರದಿಂದ ಚುಚ್ಚವುದು, ವಿದ್ಯಾರ್ಥಿಗಳು ನೋವಿನಿಂದ ಕಿರುಚುವುದು, ಹಿಂಸಕರು ನಗುವುದು ಕೇಳಿಸುತ್ತದೆ.
ಖಾಸಗಿ ಅಂಗಗಳಿಗೂ ಗಾಯವಾಗಿರುವುದು ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಗಾಯಗೊಂಡ ಜಾಗಕ್ಕೆ ಬಾಡಿ ಲೋಷನ್ ಹಚ್ಚುತ್ತಿದ್ದಂತೆ ವಿದ್ಯಾರ್ಥಿಗಳು ಕಿರುಚಾಡುವುದೇ ಅನೇಕ ದೃಶ್ಯಗಳು ಕಂಡುಬಂದಿದೆ.ಈ ದೃಶ್ಯಾವಳಿಗಳು ಹೊರಗೆ ತೋರಿಸಲು ತುಂಬಾ ಭಯಾನಕವಾಗಿದೆ. ಕುತ್ತಿಗೆಯ ಮೇಲೆ ಚಾಕಿರಿಸಿ ಬೆದರಿಕೆ ಹಾಕಲಾಗಿದೆ. ಘಟನೆಯಲ್ಲಿ ಬಂಧಿತರಾದ ಐವರನ್ನು ನ್ಯಾಯಾಲಯ ರಿಮಾಂಡ್ ಮಾಡಿದೆ.
ಮಲಪ್ಪುರಂ ವಂದೂರು ಕರುಮಾರಪಟ್ಟದ ಮನೆಯ ರಾಹುಲ್ ರಾಜ್ (22), ಮಲಪ್ಪುರಂ ಮಂಚೇರಿ ಪಯ್ಯನಾಡಿನ ಕಚೇರಿಪಾಡಿ ಮನೆಯ ರಿಜಿಲ್ ಜಿತ್ (20), ಮುನ್ನಿಲವ್ ವಳಕಂ ಕರಪಳ್ಳಿ ಕೀರಿಪ್ಳಕಲ್ ಮನೆಯ ಸ್ಯಾಮುಯೆಲ್ (20), ವಯನಾಡಿನ ಪುಲ್ಪಲ್ಲಿ ನ್ಯಾವಲತ್ ಮನೆಯ ಜೀವಾ (19), ಮತ್ತೊರ್ವ ವಿವೇಕ್ ನಡ್ತಂಗ. (21) ಬಂಧಿತರು. ಲಿಬಿನ್, ಅಜಿತ್, ದಿಲೀಪ್, ಆದರ್ಶ್, ಅರುಣ್ ಮತ್ತು ಅಮಲ್ ರ್ಯಾಗಿಂಗ್ ಗೆ ಒಳಗಾದವರು. ನವೆಂಬರ್ ನಲ್ಲಿ ಆರಂಭವಾದ ಮೂರು ತಿಂಗಳ ನಿರಂತರ ರ್ಯಾಗಿಂಗ್ ಬಗ್ಗೆ ಮೂವರು ದೂರು ನೀಡಿದ್ದರು.
ಮೈಮೇಲೆಲ್ಲಾ ಗಾಯಗಳಿದ್ದ ಆರೋಪಿಗಳು ಈ ಗಾಯಗಳ ಮೇಲೆ ಲೋಷನ್ ಸುರಿದಿದ್ದರು. ಲೋಷನ್ ಅನ್ನು ಬಾಯಿ ಮತ್ತು ದೇಹದ ಭಾಗಗಳಿಗೆ ಹಚ್ಚಿಕೊಂಡು ಆನಂದಿಸುವುದು ಅವರ ವಿಧಾನವಾಗಿತ್ತು. ಬೆತ್ತಲೆಯಾಗಿರಿಸಿ, ಅವರ ಖಾಸಗಿ ಭಾಗಗಳಲ್ಲಿ ಡಂಬ್ಬೆಲ್ಗಳನ್ನು ನೇತುಹಾಕಿ ಮೊಬೈಲ್ ಫೋನ್‌ಗಳಲ್ಲಿ ಚಿತ್ರಗಳನ್ನು ತೆಗೆಯಲಾಯಿತು. ಭಾನುವಾರದಂದು ಆರೋಪಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳ ಕತ್ತು ಹಿಡಿದು ಬೆದರಿಸಿ ಕುಡಿತಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದು ಜೂನಿಯರ್ ವಿದ್ಯಾರ್ಥಿಗಳಿಂದ ಸರದಿಯಂತೆ ಹಣ ಸಂಗ್ರಹವನ್ನು ಮಾಡಲಾಯಿತು. ಕೇಳಿದ ಹಣ ಕೊಡದಿದ್ದರೆ ಕಿರುಕುಳ ಎದುರಿಸಬೇಕಾಗುತ್ತಿತ್ತು.