ಕುಂಬಳೆ: ಮಂಜೇಶ್ವರ ತಾಲೂಕು ಚಾಲ್ತಿಗೆ ಬಂದು ದಶಕವಾದರೂ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುವ ತಾಲೂಕು ಕಚೇರಿಗೆ ಸ್ವಂತ ಕಟ್ಟಡ ಮಂಜೂರುಗೊಳಿಸಲು ಸಾಧ್ಯವಾಗದಿರುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳ ಸಂಪೂರ್ಣ ಅನಾಸ್ಥೆ ಎಂದು ಮಂಗಲ್ಪಾಡಿ ಜನಪರ ವೇದಿಕೆ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ತಾಲೂಕು ಕಚೇರಿ ಹಾಗೂ ಸಂಬಂಧಪಟ್ಟ ಕಚೇರಿಗಳನ್ನು ಮಂಜೂರುಗೊಳಿಸದೆ ಭಾಷಾ ಅಲ್ಪಸಂಖ್ಯಾತರಲ್ಲಿ ಸರ್ಕಾರ ತೀವ್ರ ಅವಗಣನೆಯನ್ನು ತೋರುತ್ತಿದೆ. ಮಂಜೂರು ಮಾಡಿದ
ಕಚೇರಿಗಳೆಲ್ಲಾ ಬಾಡಿಗೆ ಕಟ್ಟಡದಲ್ಲಿದ್ದು, ಇದರ ವಿರುದ್ಧ ಜನರನ್ನು ಸೇರಿಸಿ ತೀವ್ರ ಆಂದೋಲನ ನಡೆಸುವುದಾಗಿ ಜನಪರ ವೇದಿಕೆ ಎಚ್ಚರಿಸಿದೆ.
2014ರಲ್ಲಿ ತಾಲೂಕು ಮಂಜೂರುಗೊಂಡ ಅಂದಿನಿಂದ ಉಪ್ಪಳದ ಖಾಸಗಿ ಕಟ್ಟಡದ ಮೇಲಂತಸ್ತಿನಲ್ಲಿ ಪ್ರಧಾನ ಕಚೇರಿಗಳು ಕಾರ್ಯಾಚರಿಸುತ್ತಿವೆ. ಲಿಫ್ಟ್ ಸೌಕರ್ಯ ಕೂಡಾ ಇಲ್ಲದ ಇಲ್ಲಿ ಪ್ರಾಯವಾದವರು, ಮಹಿಳೆಯರು, ರೋಗಿಗಳ ಸಹಿತ ಜನರು ಕಚೇರಿಯ ಮೆಟ್ಟಿಲುಗಳನ್ನು ಹತ್ತಲು ಬಹಳಷ್ಟು ಸಂಕಷ್ಟಪಡುತ್ತಿದ್ದಾರೆ. ಮಂಜೇಶ್ವರ ತಾಲೂಕಿನ ಜೊತೆಯಲ್ಲೇ ಮಂಜೂರಾದ ವೆಳ್ಳರಿಕುಂಡ್ ತಾಲೂಕು ಎಲ್ಲಾ ರೀತಿಯಲ್ಲೂ ಪೂರ್ಣಸಜ್ಜುಗೊಂ ಡಿದೆ. ರಾಜ್ಯದಲ್ಲಿ ಹೊಸ ತಾಲೂಕು ಗಳಿಗೆ ಬೇಕಾಗಿ ಸರಕಾರ ತುರ್ತು ಚರ್ಚೆ, ತೀರ್ಮಾನಗಳನ್ನು ಕೈಗೊಳ್ಳುತ್ತಿರು ವಾಗ ಮಂಜೇಶ್ವರ ತಾಲೂಕನ್ನು ಮಾತ್ರ ಅವಗಣಿಸುತ್ತಿರುವುದು ವಂಚನೆಯಾಗಿದೆ ಎಂದು ಪದಾಧಿಕಾರಿಗಳು ಆರೋಪಿಸಿದರು.
ತಾಲೂಕು ಕಚೇರಿ ಕಾರ್ಯಾಚರಿಸಲು ಇರಬೇಕಾದ ಯಾವುದೇ ಸೌಕರ್ಯವಿಲ್ಲದ ಕಟ್ಟಡದಲ್ಲಿ ಕಟ್ಟಡ ಮಾಲಕನ ಆಸಕ್ತಿಗೆ ಅನುಸಾರವಾಗಿ ಕಚೇರಿ ಸೌಕರ್ಯವನ್ನು ಸಿದ್ಧಪಡಿಸಲಾಗಿದೆ. ಇದರಿಂದ ಜನಸಾಮಾನ್ಯರು ಕಚೇರಿಗೆ ತಲುಪಿದರೆ ಸಮಸ್ಯೆಗೆ ತುತ್ತಾಗುತ್ತಾರೆ. ಮಂಜೇಶ್ವರದ ಜನತೆಯೊಂದಿಗೆ ಎಂದೂ ಅವಗಣನೆ ಮಾತ್ರವೇ ತೋರುತ್ತಿರುವ ಸರ್ಕಾರ ಜನರ ಸಂಕಷ್ಟವನ್ನು ಕಂಡೂ ಕಾಣದೆ ವರ್ತಿಸುತ್ತಿರುವುದಾಗಿ ಸಮಿತಿ ಆರೋಪಿಸಿದೆ. ಈ ಬಾರಿಯ ಮುಂಗಡಪತ್ರದಲ್ಲೂ ಮಂಜೇಶ್ವರ ತಾಲೂಕಿನ ಬಗ್ಗೆ ಪರಾಮμರ್É ನಡೆಸಿಲ್ಲ. ತಾಲೂಕು ಆಧಾರದಲ್ಲಿ ಜ್ಯಾರಿಗೆ ಬಂದ ಸಾರ್ವಜನಿಕ ವಿತರಣಾ ಕಚೇರಿ, ತಾಲೂಕು ಆಸ್ಪತ್ರೆ ಎಂಬಿವುಗಳ ಸ್ಥಿತಿಯೂ ಇದೇ ಆಗಿದೆ. ನ್ಯಾಯಾಲಯದ ಸಮುಚ್ಛಯ, ಸಬ್ ಜೈಲ್, ಡಿವೈಎಸ್‍ಪಿ ಕಚೇರಿ, ಆರ್‍ಟಿಒ ಕಚೇರಿ ಮೊದಲಾದ ಸಂಬಂಧಪಟ್ಟ ಸಂಸ್ಥೆಗಳು ಎಂದು ಜಾರಿಯಾಗಲಿದೆ ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲ. ಇನ್ನು ಈ ಅವಗಣನೆ ಮುಂದುವರಿಸಿದರೆ ಆಂದೋಲನದೊಂದಿಗೆ ಮುಂದುವರಿಯುವುದಾಗಿ ಜನಪರ ವೇದಿಕೆ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಅಬು ತಮಾಮ್, ಸಿದ್ದಿಕ್ ಕೈಕಂಬ, ಅಶಾಫ್ ಮೂಸ, ಶಾಜಹಾನ್, ಶಂಸು ಕುಬಣೂರು, ಸಾಜನ್ ಕುಕ್ಕಾರ್ ಉಪಸ್ಥಿತರಿದ್ದರು.