ಎಐ ತಂತ್ರಜ್ಞಾನ ಈಗ ಎಲ್ಲಾ ವಲಯದಲ್ಲೂ ಯಾರು ಊಹಿಸಿದ ರೀತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಅದರಲ್ಲೂ ನೀವು ಅಂದುಕೊಂಡಿದ್ದಕ್ಕಿಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಎಐ ಎಲ್ಲಾ ವಯಲಯದಲ್ಲಿ ಆತಂಕಕಾರಿಯಾಗಿ ವೆಳೆಯುತ್ತಿರುವುದು ನೋಡಬಹುದು. ಅದರಲ್ಲೂ ಚೀನಾ, ಅಮೆರಿಕದಂತಹ ದೇಶಗಳು ಎಐ ತಂತ್ರಜ್ಞಶಾನಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ವ್ಯಯಿಸುತ್ತಿವೆ. ದೊಡ್ಡ ದೊಡ್ಡ ಉದ್ಯಮಿಗಳು ಎಐ ಕಡೆಗೆ ಒಲವು ತೋರಿದ್ದಾರೆ.
ಎಐ ತಂತ್ರಜ್ಞಾನ ಮಾಡದ ಕೆಲಸವೇ ಇಲ್ಲ ಎನ್ನುವಂತಾಗಿದೆ. ಈಗ ಡ್ರೈವರ್ ಲೆಸ್ ಕಾರು, ಟ್ರೈನ್‌ಗಳಲ್ಲೂ ಎಐ ಪಾತ್ರ ವಹಿಸುತ್ತಿದೆ. ಮಾನವನಿಂದ ಮಾಡಲ್ಪಡುತ್ತಿದ್ದ ಹಲವು ಕೆಲಸಗಳಲ್ಲಿ ಈಗ ಎಐ ನಿಯಂತ್ರಣ ಸಾಧಿಸುತ್ತಿದೆ. ಕೆಲವು ವಲಯದಲ್ಲಿ ಉದ್ಯೋಗ ನಷ್ಟದ ಭೀತಿ ಇದ್ದರೆ ಮತ್ತೆ ಕೆಲವು ಕಡೆ ಹೊದ ಉದ್ಯೋಗ ಸೃಷ್ಟಿಗೂ ಇದು ಕಾರಣವಾಗುತ್ತಿದೆ.
ಆದ್ರೆ ಈಗ ಎಐಗಳು ಭವಿಷ್ಯದಲ್ಲಿ ನಡೆಯಲಿರುವ ಘಟನೆಗಳು, ವಿಚಾರಗಳನ್ನೂ ಕೂಡ ನಿಖರವಾಗಿ ಹೇಳಲು ಮುಂದಾಗಿವೆ. ಎಐ ಮೂಲಕ ನೀವು ಎಲ್ಲಾ ವಿಚಾರ ತಿಳಿಯಬಹುದಾಗಿದೆ. ಇನ್ನು ವ್ಯಕ್ತಿಯೊಬ್ಬನ ಸಾವು ಕೂಡ ಎಐ ಮೂಲಕ ತಿಳಿಯಬಹುದು. ಹೌದು ಸಾವು ಎಂಬುದು ಯಾವಾಗ ಬರುತ್ತೆ ಅನ್ನೋದನ್ನು ಯಾರು ಕೂಡ ನಿಖರವಾಗಿ ಊಹಿಸಲು ಸಾಧ್ಯವಿಲ್ಲ ಎಂಬ ಮಾತಿತ್ತು. ಆದ್ರೆ ಈ ಕಾಲದಲ್ಲಿ ಇದು ಕೂಡ ಸಾಧ್ಯವಾಗುತ್ತಿದೆ.
Powered By SKIP ನೀವು ಯಾವ ವಯಸ್ಸಿನಲ್ಲಿ ಸಹಜ ಸಾವಿಗೆ ಒಳಗಾಗುತ್ತೀರಿ ಎಂಬುದನ್ನು ಎಐ ನಿಖರವಾಗಿ ಹೇಳಲಿದೆ. ನಿಮಗೆ ಇದು ಅಚ್ಚರಿ ಎನಿಸಬಹುದು. ಆದ್ರೆ ಈ ರೀತಿಯ ಎಐ ವೆಬ್‌ಸೈಟ್‌ವೊಂದು ಭಾರೀ ಸಂಚಲನಕ್ಕೆ ಕಾರಣವಾಗಿದೆ. 'ಡೆತ್ ಕ್ಲಾಕ್' ಎಂಬ ಎಐ ಚಾಲಿತ ವೆಬ್‌ಸೈಟ್ ಈ ರೀತಿ ನಿಮ್ಮ ಆಯಸ್ಸಿನ ಕುರಿತು ನಿಖರವಾಗಿ ಹೇಳುತ್ತಿದೆ. ಈ ವಿಚಾರ ತಿಳಿದ ಮಂದಿ ವೆಬ್‌ಸೈಟ್ ಹುಡುಕಾಡಲು ಮುಂದಾಗಿದ್ದಾರೆ. ಡೆತ್ ಕ್ಲಾಕ್ ಎಂಬ ಉಚಿತ ವೆಬ್‌ಸೈಟ್ ವಯಸ್ಸು, ಬಾಡಿ ಮಾಸ್ ಇಂಡೆಕ್ಸ್, ಆಹಾರ ಪದ್ಧತಿ, ವ್ಯಾಯಾಮ, ಧೂಮಪಾನದ ಅಭ್ಯಾಸ, ಮದ್ಯಪಾನದ ಅಭ್ಯಾಸ ಸೇರಿ ಹಲವು ಅಂಶಗಳ ಲೆಕ್ಕಾಚಾರ ಹಾಕಲಿದೆ. ಈ ಡೇಟಾಗಳ ಆಧಾರದ ಮೇಲೆ ನೀವು ಎಷ್ಟು ವರ್ಷ ಬದುಕುತ್ತೀರಿ ಎನ್ನುವ ದಿನಾಂಕವನ್ನು ವಿಶ್ಲೇಷಣೆ ಮಾಡಲಿದೆ. ಅಲ್ಲದೆ ನೀವು ಯಾವ ರೀತಿ ಸಾಯುತ್ತೀರಿ ಅನ್ನೋದನ್ನು ಕೂಡ ವಿವರಿಸಲಿದೆ.
SKIP ನೀವು ಯಾವ ವಯಸ್ಸಿನಲ್ಲಿ ಸಹಜ ಸಾವಿಗೆ ಒಳಗಾಗುತ್ತೀರಿ ಎಂಬುದನ್ನು ಎಐ ನಿಖರವಾಗಿ ಹೇಳಲಿದೆ. ನಿಮಗೆ ಇದು ಅಚ್ಚರಿ ಎನಿಸಬಹುದು. ಆದ್ರೆ ಈ ರೀತಿಯ ಎಐ ವೆಬ್‌ಸೈಟ್‌ವೊಂದು ಭಾರೀ ಸಂಚಲನಕ್ಕೆ ಕಾರಣವಾಗಿದೆ. 'ಡೆತ್ ಕ್ಲಾಕ್' ಎಂಬ ಎಐ ಚಾಲಿತ ವೆಬ್‌ಸೈಟ್ ಈ ರೀತಿ ನಿಮ್ಮ ಆಯಸ್ಸಿನ ಕುರಿತು ನಿಖರವಾಗಿ ಹೇಳುತ್ತಿದೆ. ಈ ವಿಚಾರ ತಿಳಿದ ಮಂದಿ ವೆಬ್‌ಸೈಟ್ ಹುಡುಕಾಡಲು ಮುಂದಾಗಿದ್ದಾರೆ. ಡೆತ್ ಕ್ಲಾಕ್ ಎಂಬ ಉಚಿತ ವೆಬ್‌ಸೈಟ್ ವಯಸ್ಸು, ಬಾಡಿ ಮಾಸ್ ಇಂಡೆಕ್ಸ್, ಆಹಾರ ಪದ್ಧತಿ, ವ್ಯಾಯಾಮ, ಧೂಮಪಾನದ ಅಭ್ಯಾಸ, ಮದ್ಯಪಾನದ ಅಭ್ಯಾಸ ಸೇರಿ ಹಲವು ಅಂಶಗಳ ಲೆಕ್ಕಾಚಾರ ಹಾಕಲಿದೆ. ಈ ಡೇಟಾಗಳ ಆಧಾರದ ಮೇಲೆ ನೀವು ಎಷ್ಟು ವರ್ಷ ಬದುಕುತ್ತೀರಿ ಎನ್ನುವ ದಿನಾಂಕವನ್ನು ವಿಶ್ಲೇಷಣೆ ಮಾಡಲಿದೆ. ಅಲ್ಲದೆ ನೀವು ಯಾವ ರೀತಿ ಸಾಯುತ್ತೀರಿ ಅನ್ನೋದನ್ನು ಕೂಡ ವಿವರಿಸಲಿದೆ. "ಅಮೆರಿಕ ತಲುಪೋ ಡಂಕಿ ಮಾರ್ಗ ಅಂದ್ರೇನು? ಅಡ್ಡದಾರಿಗೂ ಹತ್ತಾರು ಸವಾಲು..!" ನೀವು ಎಲ್ಲಿ ವಾಸಿಸುತ್ತಿದ್ದೀರಿ, ಅಲ್ಲಿನ ಹವಾಮಾನ, ವಾಯು ಮಾಲಿನ್ಯ ಆಹಾರ ಕ್ರಮ ಕೂಡ ಈ ಜೀವನ ಮಟ್ಟ ನಿರ್ಧಾರಕ ಅಂಶವಾಗಿದೆ. ಈ ಎಐ ತಂತ್ರಾಂಶವು ಎಷ್ಟು ವರ್ಷಗಳ ಕಾಲ ಬದುಕುತ್ತಾರೆ ಎಂಬುದನ್ನು ನಿಖರವಾದ ವಯಸ್ಸಿನ ಲೆಕ್ಕಾಚಾರ ಮಾಡುತ್ತದೆ ಮತ್ತು ಗ್ರಿಮ್ ರೀಪರ್ ಬರುವವರೆಗೆ ಉಳಿದಿರುವ ದಿನಗಳು, ಗಂಟೆಗಳು, ನಿಮಿಷಗಳು ಮತ್ತು ಸೆಕೆಂಡುಗಳನ್ನು ಎಣಿಸುತ್ತದೆ. ನಿಮ್ಮ ಕುರಿತ ಪ್ರತಿಯೊಂದು ಮಾಹಿತಿಯನ್ನು ಕೂಡ ನಮೂದಿಸಿದರೆ ಅಂತಿಮ ಉತ್ತರ ನೀಡಲಿದೆ. ಆದರೆ ನೀವು ನೀಡಿದ ಮಾಹಿತಿಯಲ್ಲಿ ಲೋಪವಿದ್ದರೆ ನಿಮ್ಮ ಫಲಿತಾಂಶದಲ್ಲೂ ಬದಲಾವಣೆ ಆಗಲಿದೆ. ಈ ಎಐ ಚಾಲಿತ ವೆಬ್‌ಸೈಟ್ ಸುಮಾರು 63 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರ ಸಾಯುವ ದಿನಾಂಕವನ್ನು ನಿಖರವಾಗಿ ಗುರುತಿಸಿದೆಯಂತೆ.
ಸದ್ಯ ಈ ವೆಬ್‌ಸೈಟ್ ಬಹಳ ವೈರಲ್ ಆಗಿದೆ. ಬಳಕೆದಾರರು ತಮ್ಮ ಕೊನೆಯ ದಿನ ನೋಡುವ ಉದ್ದೇಶದಿಂದ ಮಾಹಿತಿಗಳ ಹಂಚಿಕೊಳ್ಳಲು ಮುಂದಾಗಿದ್ದಾರೆ. ಆದ್ರೆ ಇದು ಎಷ್ಟು ನಿಖರವಾಗಿ ನಿಮ್ಮ ಕೊನೆಯ ದಿನವನ್ನು ಹೇಳುತ್ತಿದೆ ಎಂಬುದನ್ನು ಖಚಿತವಾಗಿ ನಂಬುವುದು ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದು ಉಚಿತ ವೆಬ್‌ಸೈಟ್ ಆಗಿರೋದ್ರಿಂದ ಬಳಕೆದಾರರು ಮುಗಿಬಿದ್ದಿರುವುದು ನೋಡಬಹುದು.