ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅವರು ಮಂಡಲ ಸಮಿತಿಯ ನೂತನ ಸಮಿತಿಯನ್ನು ಶನಿವಾರ ಘೋಷಿಸಿದ್ದಾರೆ.
ಮಂಡಲದ ಪ್ರಮುಖರ ಅಭಿಪ್ರಾಯ, ಜಿಲ್ಲಾ ಅಧ್ಯಕ್ಷೆ, ರಾಜ್ಯ ಸಂಘಟನಾ ಸಹ ಪ್ರಭಾರಿ, ಮಾಜಿ ಜಿಲ್ಲಾಧ್ಯಕ್ಷರು, ಹಾಗೂ ಜಿಲ್ಲಾ ಮಾಜಿ ಪ್ರ ಕಾರ್ಯದರ್ಶಿ ವೇಲಾಯುಧನ್ ಉಪಸ್ಥಿತಿಯಲ್ಲಿ ನೂತನ ಸಮಿತಿಗೆ ಅಂಗಿಕರ ನೀಡಲಾಗಿದೆ.
ಪ್ರಧಾನ ಕಾರ್ಯದರ್ಶಿಗಳಾಗಿ ಯತಿರಾಜ್ ಶೆಟ್ಟಿ, ಕೆ.ವಿ.ರಾಧಾಕೃಷ್ಣ ಭಟ್, ಉಪಾಧ್ಯಕ್ಷರುಗಳಾಗಿ ಚಂದ್ರಹಾಸ ಪೂಜಾರಿ, ಲೋಕೇಶ್ ನೋಂಡ, ಆಶಲತಾ ಬಿ.ಎಂ., ಚಂದ್ರಾವತಿ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ತುಳಸೀಕುಮಾರಿ, ಸಂತೋಷ್ ದೈಗೋಳಿ, ರಮೇಶ್ ಅಟ್ಟೆಗೋಳಿ, ರಾಜೀವಿ ಶೆಟ್ಟಿಗಾರ್, ಗಣೇಶ್ ನಾಯ್ಕ ಚೇರಾಲು, ಶ್ವೇತಾ ಪಾವಳ, ಖಜಾಂಜಿಯಾಗಿ ವಿಘ್ನೇಶ್ವರ ಮಾಸ್ತರ್ ಹಾಗೂ ಇತರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಗಿದೆ.