ರಾಜ್ಯದಲ್ಲಿ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ, ಮಾರ್ಚ್ ಶುರುವಾಗುವ ಮುನ್ನವೇ ಬೇಸಿಗೆ ಶುರುವಾಗಿದೆ. ಏಪ್ರಿಲ್- ಮೇ ತಿಂಗಳು ಇನ್ನಷ್ಟು ಸೆಕೆ ಹೆಚ್ಚಾಗಬಹುದು. ಉತ್ತರ ಕನ್ನಡ, ಮಂಗಳೂರು-ಉಡುಪಿಯಲ್ಲಿ ಹೀಟ್‌ವೇವ್ ಉಂಟಾಗಿದೆ, ಅಂದರೆ ಫೆಬ್ರವರಿ 26-27ಕ್ಕೆ ಅತ್ಯಧಿಕ ಉಷ್ಣಾಂಶ ತಲುಪಿದೆ.
ಹೊರಗಡೆ ಸ್ವಲ್ಪ ಹೊತ್ತು ಓಡಾಡಿದರ ಸುಸ್ತಾಗಿ ಬಿಡುತ್ತೇವೆ, ಬಿಸಿಲಿನ ತಾಪಮಾನ ಅಷ್ಟೊಂದು ಇದೆ. ತಾಪಮಾನ 38.7°C ತಲುಪಿದರೆ ಹೀಟ್‌ವೇವ್ ಎಂದು ಕರೆಯಲಾಗುವುದು, ಮಂಗಳೂರಿನಲ್ಲಿ ಫೆಬ್ರವರಿ 26ಕ್ಕೆ 37.2°C ಉಷ್ಣಾಂಶ ತಲುಪಿತ್ತು.
ಬಿಸಿಲಿನ ಧಗೆ ಹೆಚ್ಚಿರುವಾಗ ಜನರು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು, ಏಕೆಂದರೆ ಹೀಟ್‌ಸ್ಟ್ರೋಕ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ಉಂಟಾಗುವುದು. ಬೇಸಿಗೆಯಲ್ಲಿ ಆರೋಗ್ಯದ ದೃಷ್ಟಿಯಿಂದ ಈ ರೀತಿ ಆರೈಕೆ ಮಾಡುವುದು ಒಳ್ಳೆಯದು.
1. ಬಿಸಿಲಿನಲ್ಲಿ ಓಡಾಡುವಾಗ ಕೊಡೆ ಹಿಡಿದು ಓಡಾಡಿ
2. ಹತ್ತಿಯ ಬಟ್ಟೆಗಳನ್ನು ಧರಿಸಿ, ಬಿಗಿಯಾದ ಉಡುಪು ಅಥವಾ ಕಡು ಬಣ್ಣದ ಉಡುಪು, ಪಾಲಿಸ್ಟಾರ್ ಮುಂತಾದ ಉಡುಪುಗಳು ಸೆಕೆ ಹೆಚ್ಚಿಸುತ್ತದೆ
ಹೊರಗಡೆ ಓಡಾಡುವಾಗ ಕ್ಯಾಪ್ ಧರಿಸಿ
ಬಿಸಿಲಿನಲ್ಲಿ ಕೆಲಸ ಮಾಡುವವರು ಮಧ್ಯಾಹ್ನ ಹೊತ್ತು ಮಾಡಬೇಡಿ ( ರೋಡ್ ಕೆಲಸ, ಗಾರೆ ಕೆಲಸ ಹೀಗೆ ಬಿಸಿಲಿನಲ್ಲಿ ಕೆಲಸ ಮಾಡುವವರು ಬೆಳಗ್ಗೆ ಮತ್ತು ಸಂಜೆ ಕೆಲಸ ಮಾಡಿ ಮಧ್ಯಾಹ್ನ ವಿಶ್ರಾಂತಿ ತೆಗೆದುಕೊಳ್ಳಬೇಕು)
ಮನೆಯನ್ನು ಕೂಡ ತಂಪಾಗಿ ಇಡಿ
ಸಾಕಷ್ಟು ನೀರು ಕುಡಿಯಿರಿ, ಈ ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವುದು ಒಳ್ಳೆಯದು
ಬಿಸಿಲಿನಲ್ಲಿ ಓಡಾಡುವಾಗ ಯಾರಾದರು ತಲೆ ತಿರುಗಿ ಬಿದ್ದರೆ ಅವರನ್ನು ನೆರಳಿನಲ್ಲಿ ಕೂರಿಸಿ ಆಂಬ್ಯೂಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿ
ಬರಿ ನೀರು ಕುಡಿಯಲು ಬೇಸರವಾದರೆ ನಿಂಬೆ ಜ್ಯೂಸ್, ಮಜ್ಜಿಗೆ, ಪುರ್ನಪುಳಿ, ಕಹಿಕಹಿಳಿ ಜ್ಯೂಸ್ ಅಂತೆಲ್ಲಾ ಮಾಡಿ ಕುಡಿಯಿರಿ.
ಏನು ಮಾಡಬಾರದು?
ಮಧ್ಯಾಹ್ನ ಬಿಸಿಲಿನಲ್ಲಿ ಓಡಾಡಬೇಡಿ
ಬೇಸಿಗೆಯಲ್ಲಿ ಕಾಫಿ, ಟೀ ಕುಡಿಯಬೇಡಿ.
ಹೀಟ್ ಸ್ಟ್ರೋಕ್ ಉಂಟಾದವರಗೆ ಚಿಕಿತ್ಸೆ ಕೊಡಿಸಲು ಮರೆಯದಿರಿ.
ವ್ಯಕ್ತಿಗೆ ಹೀಟ್‌ಸ್ಟ್ರೋಕ್ ಉಂಟಾಗಿದೆ ಎಂದು ತಿಳಿಯುವುದು ಹೇಗೆ?
ಬಿಸಿಲಿಗೆ ಹೋದಾಗ ವ್ಯಕ್ತಿಯಲ್ಲಿ ಈ ಲಕ್ಷಣಗಳು ಕಂಡು ಬಂದರೆ ಹೀಟ್‌ಸ್ಟ್ರೋಕ್ ಆಗಿದೆ ಎಂದರ್ಥ:
ಮೈ ಉಷ್ಣಾಂಶ 104 ಡಿಗ್ರಿF ಇರುತ್ತದೆ
ವರ್ತನೆಯಲ್ಲಿ ವ್ಯತ್ಯಾಸ ಉಂಟಾಗುವುದು(ಒಂದು ರೀತಿಯ ಕೋಪ-, ಅವರನ್ನು ಹಿಡಿಯುವುದೇ ಕಷ್ಟವಾಗುವುದು)
ಕಣ್ಣುಗಳು ಮಂಜಾಗುವುದು
ಮಾತನಾಡಲು ಕಷ್ಟವಾಗುವುದು
ತಲೆಸುತ್ತು
ಹೃದಯಬಡಿತ ಹೆಚ್ಚಾಗುವುದು
ರಕ್ತದೊತ್ತಡ ಕಡಿಮೆಯಾಗುವುದು
ವಾಂತಿ
ಮೂರ್ಛೆ ಹೋಗುವುದು
ತ್ವಚೆ ಬಿಳುಚಿಕೊಳ್ಳುವುದು
ತ್ವಚೆ ಡ್ರೈಯಾಗುವುದು
ತುಂಬಾನೇ ಸುಸ್ತು
ಈ ಹೀಟ್ ಸ್ಟ್ರೋಕ್ ಉಂಟಾದಾಗ ಕೂಡಲೇ ಚಿಕಿತ್ಸೆ ದೊರೆಯದಿದ್ದರೆ ಈ ಅಪಾಯಗಳಿವೆ
ವ್ಯಕ್ತಿ ಕೋಮಾಗೆ ಜಾರಬಹುದು
ಸ್ನಾಯುಗಳು ದುರ್ಬಲವಾಗುವುದು
ರಕ್ತದೊತ್ತಡ ತುಂಬಾನೇ ಕಡಿಮೆಯಾಗುವುದು
ಅಂಗಾಂಗ ವೈಫಲ್ಯ(ಉಸಿರಾಟದ ಸಮಸ್ಯೆ,ಕಿಡ್ನಿ ಡ್ಯಾಮೇಜ್, ಹೃದಯಾಘಾತ, ಲಿವರ್ ಸಮಸ್ಯೆ) ಹೀಗೆ ಅನೇಕ ಸಮಸ್ಯೆಗಳು ಉಂಟಾಗಬಹುದು
ವ್ಯಕ್ತಿಗೆ ಸಾವು ಕೂಡ ಸಂಭವಿಸಬಹುದು.
ಹಾಗಾಗಿ ಬಿಸಿಲಿನ ತಾಪಮಾನ ಹೆಚ್ಚಿರುವಾಗ ಬಿಸಿಲಿನಲ್ಲಿ ಓಡಾಡಬೇಡಿ. ಕೆಲಸ ಕಾರ್ಯಗಳನ್ನು ಬೆಳಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ಮಾಡಿ, ಮಧ್ಯಾಹ್ನ ಹೊತ್ತಿನಲ್ಲಿ ನೆರಳಿನಲ್ಲಿ ವಿಶ್ರಾಂತಿ ಪಡೆಯಿರಿ.
ದ್ವಿಚಕ್ರ ವಾಹನದಲ್ಲಿ ಓಡಾಡುವವರು ಈ ಅವಧಿಯಲ್ಲಿ ಓಡಾಡುವಾಗ ನಿಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಎಳನೀರು, ಮಜ್ಜಿಗೆ ಅಂತ ಕುಡಿಯಿರಿ. ತುಂಬಾ ಸುಸ್ತು ಅನಿಸಿದಾಗ ತಿನ್ನಲು ಹೋಗಬೇಡಿ.