ಕುಂಬಳೆ : ಮೊಗ್ರಾಲ್‍ನ ವಿವಿಧ ಪ್ರದೇಶಗಳಲ್ಲಿ ಹಳದಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೊಗ್ರಾಲ್ ಪಂಚಾಯಿತಿ ಆಸುಪಾಸಿನ ಬಾವಿಗಳಿಗೆ ಕ್ಲೋರಿನೇಷನ್ ನಡೆಸಲಾಯಿತು. ರೋಗ ತಡೆಗಟ್ಟುವ ಚಟುವಟಿಕೆಗಳ ಅಂಗವಾಗಿ ಮೊಗ್ರಾಲ್ ರಾಷ್ಟ್ರೀಯ ವೇದಿ ಸಂಘಟನೆ ಸಹಕಾರದೊಂದಿಗೆ ಬಾವಿಗಳಲ್ಲಿ ಸೂಪರ್ ಕ್ಲೋರಿನೇಷನ್ ಮಾಡಲಾಯಿತು. ಕುಂಬಳೆ ಸಾಮಾಜಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕರು ನೇತೃತ್ವ ವಹಿಸಿದ್ದರು.
ಮೊಗ್ರಾಲ್ ನಾಂಗಿ ಮತ್ತು ಟಿವಿಎಸ್ ರಸ್ತೆಯಲ್ಲಿ ಜಾಂಡೀಸ್ ಕಾಣಿಸಿಕೊಂಡಿರುವ ಬಗ್ಗೆ ಮೊಗ್ರಾಲ್ ಮೊಗ್ರಾಲ್ ರಾಷ್ಟ್ರೀಯ ವೇದಿ ಕುಂಬಳೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳ ಸಂದರ್ಶನ ನಡೆಸಿ ಮಾಹಿತಿ ಸಂಗ್ರಹಿಸಿದ್ದರು. ಅಗತ್ಯವಿರುವ ಪ್ರದೇಶಗಳಲ್ಲಿ ಕ್ಲೋರಿನೇಷನ್ ಮುಂದುವರಿಯುತ್ತದೆ. ಕಿರಿಯ ಆರೋಗ್ಯ ನಿರೀಕ್ಷಕ ಅಖಿಲ್ ಕೆ, ಮೊಗ್ರಾಲ್ ರಾಷ್ಟ್ರೀಯ ವೇದಿಕೆ ಅಧ್ಯಕ್ಷ ಟಿ.ಕೆ.ಅನ್ವರ್, ಕೋಶಾಧಿಕಾರಿ ಮೊಹಮ್ಮದ್‍ಕುಞÂ, ಉಪಾಧ್ಯಕ್ಷ ಎಂ.ಜಿ.ಎ.ರಹಮಾನ್, ಟಿ.ಕೆ.ಜಾಫರ್, ಟಿ.ಕೆ.ತಾಹಿರ್, ಆಶಾವರ್ಕರ್ ಕೈರುನ್ನೀಸಾ ಮೊದಲಾದವರು ಸೂಪರ್ ಕ್ಲೋರಿನೇಷನ್ ಕಾರ್ಯಗಳಿಗೆ ನೇತೃತ್ವ ನೀಡಿದರು.