ಕುಂಬಳೆ: ಪೆರುವಾಡ್ ಸನಿಹದ ಬದರಿಯಾ ನಗರದಲ್ಲಿ ಯಾವುದೋ ಪ್ರಾಣಿ ಕೊಂದುಹಾಕಿದ ಸ್ಥಿತಿಯಲ್ಲಿ ಆರು ಕೋಳಿಗಳು ಪತ್ತೆಯಾಗಿದ್ದು, ಜತೆಗೆ ಮನೆಯ ಮೂರು ಬೆಕ್ಕುಗಳೂ ನಾಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೋಟ ಮಸೀದಿ ಸನಿಹದ ನಿವಾಸಿ ಮಹಮ್ಮದ್‍ಕುಞÂ ಎಂಬವರ ಆರು ಕೋಳಿಗಳು ಸಾವಿಗೀಡಾಗಿದೆ. ಆರು ಕೋಳಿಗಳಲ್ಲಿ ನಾಲ್ಕರ ತಲೆಯನ್ನು ತಿಂದ ಸ್ಥಿತಿಯಲ್ಲಿದೆ. ಸನಿಹದ ಬೇರೊಂದು ಮನೆಯ ಗೂಡನ್ನು ಕೆಡವಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದರಲ್ಲಿದ್ದ ಹತ್ತು ಕೋಳಿಗಳು ಉಳಿದುಕೊಂಡಿತ್ತು.
ರಾತ್ರಿ ನಾಯಿ ಬೊಗಳುತ್ತಿದ್ದ ಶಬ್ದ ಕೇಳುತ್ತಿದ್ದರೂ, ಮನೆಯವರು ಹೊರಬರಲು ಅಂಜಿಕೊಂಡಿದ್ದರು. ಬೆಳಗ್ಗೆ ಎದ್ದು ನೋಡುವಾಗ ಕೋಳಿಗಳ ಕಳೇಬರ ಪತ್ತೆಯಾಗಿತ್ತು. ಪಂಚಾಯಿತಿಯಿಂದ ಸಾಕಣಿಕೆಗಾಗಿ ಲಭಿಸಿದ ಕೋಳಿ ಇದಾಗಿತ್ತು. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮನೆಯವರು ಮಾಹಿತಿ ನೀಡಿದ್ದಾರೆ.