ಬಲ್ಲಿಯಾ: ತಮ್ಮ ಮಗನ ರಾಜಕೀಯ ಪ್ರವೇಶದ ಬಗೆಗಿನ ನಿರ್ಧಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೈಯಲಿದ್ದು, ಅವರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಬಿಹಾರದ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಸೋಮವಾರ ಹೇಳಿದ್ದಾರೆ.
ಬಿಹಾರದಲ್ಲಿ BJP ಬಹುಮತ ಸಾಧಿಸಿದರೂ ಸಿಎಂ ಆಗಿ ಮುಂದುವರಿಯಲಿದ್ದಾರೆ ನಿತೀಶ್!
ನಿತೀಶ್ ಅವರ ಪುತ್ರ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೋ ಇಲ್ಲವೊ ಎನ್ನುವುದನ್ನು ಅವರೇ ತೀರ್ಮಾನಿಸಬೇಕು.
ಅವರ ಒ
ಪ್ಪಿಗೆ ಇಲ್ಲದೆ ಇದು ಸಾಧ್ಯವಿಲ್ಲ. ಈ ಬಗ್ಗೆ ನಿತೀಶ್ ಕುಮಾರ್ ಅವರಿಗೆ ಜ್ಞಾನವಿದ್ದು, ಬಿಹಾರದ ರಾಜಕೀಯ ವಾತಾವರಣವನ್ನು ಅವರು ಚೆನ್ನಾಗಿ ಬಲ್ಲರು ಎಂದು ಹೇಳಿದ್ದಾರೆ.
ಬಲ್ಲಿಯಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಿತೀಶ್ ಕುಮಾರ್ ಗೈರಾಗಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ನಳಂದಾದಲ್ಲಿ ಪೂರ್ವನಿಗದಿತ ಕಾರ್ಯಕ್ರಮ ಇದ್ದುದ್ದರಿಂದ ದೆಹಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ' ಎಂದಿದ್ದಾರೆ.
ರೇಖಾ ಗುಪ್ತಾ ಅವರ ಪ್ರಮಾಣ ಸ್ವೀಕಾರ ಕಾರ್ಯಕ್ರಮದಲ್ಲಿ ಜೆಡಿಯುನ ಕಾರ್ಯಾಧ್ಯಕ್ಷ ಸಂಜಯ್ ಝಾ ಹಾಗೂ ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಭಾಗಿಯಾಗಿದ್ದರು.