ಪಾಲಕ್ಕಾಡ್: ಮದ್ಯದ ಕಂಪನಿಗಳಿಗೆ ಕುಡಿಯುವ ನೀರು ಕೊಡಿ ಎಂದು ಪ್ರತಿಪಾದಿಸುವವರು ಕೇರಳ ರೈತರಿಗೆ ನೀಡಬೇಕಾದ ಪರಂಬಿಕುಲಂ-ಅಲಿಯಾರ್ ಒಪ್ಪಂದದ ಪ್ರಕಾರ ತಮಿಳುನಾಡಿನಿಂದ ನೀರನ್ನು ಪಡೆಯಲು ಏಕೆ ಪ್ರಯತ್ನಿಸುತ್ತಿಲ್ಲ?
ಎಂದುಮಿಜೋರಾಂನ ಮಾಜಿ ರಾಜ್ಯಪಾಲ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಕುಮ್ಮನಂ ರಾಜಶೇಖರನ್ ಪ್ರಶ್ನಿಸಿದ್ದಾರೆ.
ಮದ್ಯದ ಕಂಪನಿಗೆ ನೀರು ಕೊಡಲು ಪ್ರತಿ ವಾದ ಮಾಡುತ್ತಿರುವ ಸಚಿವ ಎಂ.ಬಿ. ರಾಜೇಶ್, ಕೃಷಿಕರೂ ಆದ ಸಚಿವ ಕೆ. ಕೃಷ್ಣನ್‌ಕುಟ್ಟಿ ಪರಂಬಿಕುಲಂ-ಅಲಿಯಾರ್ ಒಪ್ಪಂದದಡಿ ಇಲ್ಲಿನ ರೈತರಿಗೆ ನೀರು ಕೊಡಿಸುವಲ್ಲಿಯೂ ವಿಫಲರಾಗಿರುವರು ಎಂದು ಆಪಾಇಸಿದರು.
ಪಿಣರಾಯಿ ಸರ್ಕಾರ ದೊಡ್ಡ ಏಕಸ್ವಾಮ್ಯ ಕಂಪನಿಗಳ ಪರ ನಿಂತಿದೆ. ಎಲ್ಲ ಕಾನೂನನ್ನು ಎಸೆದು ಮದ್ಯದ ಕಂಪನಿಗೆ ಅನುಮತಿ ನೀಡಿದ ಸರ್ಕಾರ ತನ್ನ ನಿಲುವು ಬದಲಿಸುವವರೆಗೂ ಬಿಜೆಪಿ ಮುಷ್ಕರ ನಡೆಸಲಿದೆ ಎಂದು ಕುಮ್ಮನಂ ಹೇಳಿದ್ದಾರೆ.
ಮಲಂಪುಳ ನೀರು ಕುಡಿಯಲು ಮತ್ತು ಕೃಷಿಗೆ ಸಾಕಾಗದೇ ಇದ್ದಾಗ ಮಾತ್ರ ಮದ್ಯ ತಯಾರಿಕೆಗೆ ಬಳಸಲಾಗುವುದು ಎಂದು ಸಚಿವರ ಘೋಷಣೆ ಮರೆತಂತಿದೆ. ಇದನ್ನು ಯಾವುದೇ ರೀತಿಯಲ್ಲೂ ಒಪ್ಪಲು ಸಾಧ್ಯವಿಲ್ಲ, ಮುಂದೆಯೂ ಪ್ರಬಲ ಹೋರಾಟ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಕುಮ್ಮನಂ ಅವರು ಮದ್ಯದ ಕಂಪನಿ ಬರುವ ಎಲಪುಲ್ಲಿ ಮನ್ನುಕ್ಕಾಡ್‌ಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ವಿಚಾರಿಸಿದರು. ಮಣ್ಣುಕ್ಕಾಡ್ ಪೀಪಲ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ಕೃಷ್ಣಕುಮಾರ್, ಪಾಲಕ್ಕಾಡ್ ಪೂರ್ವ ಜಿಲ್ಲಾಧ್ಯಕ್ಷ ಪ್ರಶಾಂತ್ ಶಿವನ್, ಪುದುಚೇರಿ ಮಂಡಲ ಅಧ್ಯಕ್ಷ ಕೆ. ಗಿರೀಶ್ ಬಾಬು, ಜಿಲ್ಲಾ ಉಪಾಧ್ಯಕ್ಷ ಸಿ. ಮಧು, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಎನ್. ಷಣ್ಮುಖನ್, ಮುಖಂಡರಾದ ವಿ. ಸಂತೋಷ್, ವಿ. ಶಶಿ, ಶ್ರೀವತ್ಸನ್, ಪ್ರಭಾಕರನ್, ಕೃಷ್ಣದಾಸ್, ಕಲಾಧರನ್, ಜಗದೀಶ್, ಪ್ರದೀಪ್ ಕುಮಾರ್, ಶರತ್ ಎಡುಪುಕುಲಂ ಮತ್ತಿತರರು ಜೊತೆಗಿದ್ದರು.