ಪೆರ್ಲ: ಬೇಡಡ್ಕ ಪಂಚಾಯಿತಿಯ ಕೊಳತ್ತೂರಿನಲ್ಲಿ ಬೋನಿನಲ್ಲಿ ಸಿಲುಕಿದ ಚಿರತೆಯನ್ನು ಎಣ್ಮಕಜೆ, ಬೆಳ್ಳೂರು ಗ್ರಾಮ ಪಂಚಾಯಿತಿ ಗಡಿಪ್ರದೇಶ ಬಂಟಾಜೆ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಸ್ಪಷ್ಟಪಡಿಸಿ ಜನರಲ್ಲಿ ಮನೆಮಾಡಿರುವ ಭೀತಿ ದೂರೀಕರಿಸಲು ಅಗತ್ಯ ಕ್ರಮಕ್ಕೆ ಆಗ್ರಹಿಸಿ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕೇರಳ ಅರಣ್ಯ ಇಲಾಖಾ ಸಚಿವರಿಗೆ ಪತ್ರ ಬರೆದಿದ್ದಾರೆ.
ಬೇರೆ ಪಂಚಾಐಇತಿ ವ್ಯಾಪ್ತಿಯಿಂದ ಸೆರೆಹಿಡಿದು ತಂದ ಚಿರತೆಯನ್ನು ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿ ಬಿಟ್ಟಿರುವುದು ಇಲಾಖೆಯ ಮಾವನೀಯತೆ ರಹಿತ ಕ್ರಮವಾಗಿದೆ. ಉದ್ದೇಶಿತ ಅರಣ್ಯ ಪ್ರದೇಶದ ಕಿಲೋ ಮೀಟರ್ ಗಳಷ್ಟು ವ್ಯಾಪ್ತಿಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿಗೊಳಪಟ್ಟ ವಾಣಿನಗರ,ಪಡ್ರೆ ಪ್ರದೇಶಗಳಿದ್ದು ಇಲ್ಲಿನ ವಾಣಿನಗರ ಹಾಗೂ ಕಜಂಪಾಡಿ ಶಾಲೆಗೆ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರು ಸಂಚರಿಸುವ ಪ್ರದೇಶವಾಗಿದ್ದು, ಚಿರತೆಯನ್ನು ಇಲ್ಲಿ ಬಿಟ್ಟಿರುವುದರಿಂದ ಜನತೆ ದಿಗ್ಬ್ರಾಂತರಾಗಿದ್ದಾರೆ. ಅರಣ್ಯ ಇಲಾಖೆಯವರೂ ಸಹ ಈ ಬಗ್ಗೆ ಸ್ಪಷ್ಟ ಉತ್ತರ ನೀಡುತ್ತಿಲ್ಲವಾದ್ದರಿಂದ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡುವಂತೆ ಪತ್ರದಲ್ಲಿ ಆಗ್ರಹಿಸಿರುವುದಾಘಿ ಎಂದು ಸೋಮಶೇಖರ್ ತಿಳಿಸಿದ್ದಾರೆ.