ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶನಿವಾರ ಧ್ವಜಾರೋಹಣಗೊಳ್ಳುವ ಮೂಲಕ ಚಾಲನೆ ನೀಡಲಾಯಿತು. ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಖ್ರಮ ನಡೆಯಲಿದೆ.
ಶನಿವಾರ ಬೆಳಗ್ಗೆ ಗಣಪತಿ ಹವನ, ಧ್ವಜರೋಹಣ, ನವಕಾಭಿಷೇಕ, ಪೆರ್ಲ ಶ್ರೀ ಸತ್ಯನಾರಾಯಣ ಭಜನಾ ಮಂದಿರ ವಠಾರದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ದೇವಸ್ಥಾನ ವರೆಗೆ ನಡೆಯಿತು. ನಂತರ ಉಗ್ರಾಣಭರಣ, ಭಜನೆ, ಸಾಂಸ್ಕøತಿಕ ಕಾರ್ಯಖ್ರಮದ ಅಂಗವಾಗಿ ತಿರುವಾದಿರ, ಕೈಕೊಟ್ಟು ಕಳಿ, ನೃತ್ಯ ಸಂಭ್ರಮ ನಡೆಯಿತು.
2ರಂದು ಬೆಳಗ್ಗೆ 8ಕ್ಕೆ 108ಕಾಯಿ ಗಣಪತಿ ಹವನ, ಮಧ್ಯಾಹ್ನ ಭಕ್ತಿ ಗಾನಸುಧಾ, ಸಂಜೆ 5ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, , 6.30ಕ್ಕೆ ನಾದಸಿಂಚನ, ಕೀಬೋರ್ಡ್, ಕೊಳಲು ವಾದನ, ರಾತ್ರಿ 8ಕ್ಕೆ ನೃತ್ಯ ಪಲ್ಲವ ನಡೆಯುವುದು. 3ರಂದು ಬೆಳಗ್ಗೆ 6ಕ್ಕೆ ಚಂಡಿಕಾ ಹವನ, 11ಕ್ಕೆ ಪೂರ್ಣಾಹುತಿ, ಸಂಜೆ 6ಕ್ಕೆ ಕಜಂಬು ಉತ್ಸವ, ರಾತ್ರಿ 8ಕ್ಕೆ ಶ್ರೀ ಉಳ್ಳಾಲ್ತಿ ನೇಮ ನಡೆಯುವುದು. 4ರಂದು ಬೆಳಗ್ಗೆ 8ಕ್ಕೆ ಶ್ರೀಸತ್ಯನಾರಾಯಣ ಪೂಜೆ, 11ಕ್ಕೆ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸ ಭಕ್ತಿ ಗಾನ, ರಾತ್ರಿ 8ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡರ ಹೊರಡುವುದು, 9ಕ್ಕೆ ತೊಡಙಳ್, ಕುಳಿಚ್ಚಾಟ ನಡೆಯುವುದು. 5ರಂದು ಬೆಳಗ್ಗೆ 9ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ, 12.30ಕ್ಕೆ ಧ್ವಜಾವರೋಹಣ ನಡೆಯುವುದು.