HEALTH TIPS

ಕಂಬಾರು ಕ್ಷೇತ್ರ : ಜಟಾಧಾರಿ ಹಾಗೂ ಪರಿವಾರ ಸಾನಿಧ್ಯಗಳ ಪುನಃಪ್ರತಿಷ್ಠೆ ಸಂಪನ್ನ

ಕುಂಬಳೆ: ಕಂಬಾರು ಕ್ಷೇತ್ರ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕ ಪ್ರಯುಕ್ತ ದೇವಳದಲ್ಲಿ ಶುಕ್ರವಾರ ಬೆಳಗ್ಗೆ 5.ರಿಂದ ಗಣಪತಿ ಹೋಮ, ಅಂಕುರ ಪೂಜೆ ಬಳಿಕ ಬೆಳಿಗ್ಗೆ 6.58ರಿಂದ 7.47ರ ಒಳಗೆ ಮಕರ ಲಘ್ನದಲ್ಲಿ ಜಟಾಧಾರಿ ಹಾಗೂ ಪರಿವಾರ ಸಾನಿಧ್ಯಗಳ ಪುನಃಪ್ರತಿಷ್ಠೆ ನಡೆಯಿತು . ಮಧ್ಯಾಹ್ನ 12.30ರಿಂದ ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ ಜರಗಿತು. ರಾತ್ರಿ 7ರಿಂದ ಅಂಕುರ ಪೂಜೆ, ಮಂಟಪ ನಮಸ್ಕಾರ ಬಳಿಕ ರಾತ್ರಿ ಪೂಜೆ ನಡೆಯಿತು . 


ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಬೆಳಿಗ್ಗೆ 9ರಿಂದ ನವಚೇತನ ಯೂತ್ ಕ್ಲಬ್, ಬಾಡೂರು ಇದರ ಪ್ರಾಯೋಜಕತ್ವದಲ್ಲಿ ಪ್ರಸಿದ್ಧ ಭಾಗವತರಿಂದ ಯಕ್ಷಗಾನ ವೈಭವ ನಡೆಯಿತು . ಸಂಜೆ 3.30ಕ್ಕೆ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಒಡಿಯೂರು ಮಠಾಧೀಶರಾದ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ, ಬಳಿಕ ಸಂಜೆ 4ರಿಂದ ಧಾರ್ಮಿಕ ಸಭೆ ನಡೆಯಿತು. ರಾತ್ರಿ 8ರಿಂದ ಶ್ರೀ ದುರ್ಗಾ ಯುವಕ ಸಂಘ, ಬಾಡೂರು ಅದರ ಪ್ರಾಯೋಜಕತ್ವದಲ್ಲಿ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಿತು . 

ಶನಿವಾರ ಬೆಳಿಗ್ಗೆ 6ರಿಂದ ಗಣಪತಿ ಹೋಮ, ಅಂಕುರ ಪೂಜೆ, ತತ್ವ ಕಲಶಪೂಜೆ, ತತ್ವಹೋಮ, ತತ್ವ ಕಲಶಾಭಿಷೇಕ,ಅನುಜ್ಞಾ ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ 12.30ರಿಂದ ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ ಜರಗಿತು. ರಾತ್ರಿ 7ಕ್ಕೆ ಕುಂಭೇಶ ಕರ್ಕರಿ ಕಲಶ ಪೂಜೆ, ಅವಾಸ ಹೋಮ, ಬ್ರಹ್ಮಕಲಶಪೂಜೆ, ಪರಿಕಲಶ ಪೂಜೆ, ಕಲಶಾಧಿವಾಸ ಬಳಿಕ ರಾತ್ರಿ ಪೂಜೆ ಜರಗಿತು.  


ಸಾಂಸ್ಕøತಿಕ ಹಾಗೂ ಧಾರ್ಮಿಕ ಕಾರ್ಯಕ್ರಮದಂಗವಾಗಿ ಬೆಳಿಗ್ಗೆ 9ರಿಂದ ವಿವಿಧ ಭಜನಾ ಸಂಘಗಳಿಂದ ಭಜನೆ, ಬೆಳಿಗ್ಗೆ 11ರಿಂದ ವಿದುಷಿ, ಶಿಲ್ಪಾ ವಿಶ್ವನಾಥ ಭಟ್ ಮತ್ತು ಶಿಷ್ಯೆಯರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಸಂಜೆ 4.30ರಿಂದ ಮಾಣಿಲ ಶ್ರೀ  ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನಡೆದು ಸಂಜೆ 5ರಿಂದ ಧಾರ್ಮಿಕ ಸಭೆ ಜರಗಿತು. ರಾತ್ರಿ 7ರಿಂದ ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯರಿಂದ ನೃತ್ಯಾಮೃತಂ ನಡೆಯಿತು.  ರಾತ್ರಿ 9.30ರಿಂದ ಶ್ರೀದುರ್ಗಾ ಕೋಳಾರು ಮತ್ತು ಶ್ರೀದುರ್ಗಾ ಮಹಿಳಾ ಸಂಘ ಕೋಳಾರು ಇದರ ಪ್ರಾಯೋಜಕತ್ವದಲ್ಲಿ ಪೊರಿಪುದಪ್ಪೆ ಜಲದುರ್ಗೆ ಎಂಬ ತುಳು ಪೌರಾಣಿಕ ನಾಟಕ ಪ್ರದರ್ಶನಗೊಂಡಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries