ನವದೆಹಲಿ: ಮಹಾ ಶಿವರಾತ್ರಿಯ ಶುಭ ಸಂದರ್ಭದಲ್ಲಿ ನೆರೆಯ ದೇಶದ ಕ್ರಿಕೆಟಿಗರು ದೇವಾಲಯದ ಭೇಟಿ, ಆಚರಣೆಗಳ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶಿಸಿದ್ದಾರೆ. ಬಾಂಗ್ಲಾದೇಶದ ಕ್ರಿಕೆಟಿಗ ಲಿಟ್ಟನ್ ದಾಸ್, ಮಹಾ ಶಿವರಾತ್ರಿಯನ್ನು ಭಕ್ತಿಭಾವ, ಶ್ರದ್ದಾಪೂರ್ವಕವಾಗಿ ಆಚರಿಸಿದ್ದಾರೆ. ಶಿವಲಿಂಗಗಳಿಗೆ ವಿಶೇಷ ಅಭಿಷೇಕ, ಪೂಜೆ ಪುನಸ್ಕಾರ ಮಾಡಿದ್ದಾರೆ. ಇದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಹಿಂದೂ ಕುಟುಂಬದಿಂದ ಬಂದಿರುವ ಲಿಟ್ಟನ್ ದಾಸ್, ಚಾಂಪಿಯನ್ ಟ್ರೋಫಿ ಪಂದ್ಯಗಳಲ್ಲಿ ಬಾಂಗ್ಲಾದೇಶದ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಇನ್ನೂ ಭಾರತದಲ್ಲಿ ಹಲವಾರು ಕ್ರಿಕೆಟ್ ತಾರೆಯರು ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಮಹಾಶಿವರಾತ್ರಿ ಆಚರಿಸಿದ್ದಾರೆ. IPL 2025 ಟೂರ್ನಿಗಾಗಿ ಮುಂಬೈ ಇಂಡಿಯನ್ಸ್ ಪರ ಆಟಗಾರರಾದ ತಿಲಕ್ ವರ್ಮಾ, ದೀಪಕ್ ಚಹಾರ್ ಮತ್ತು ಕರಣ್ ಶರ್ಮಾ ಅವರು ಮುಂಬೈನ ಐತಿಹಾಸಿಕ ಬಾಬುಲ್‌ನಾಥ್ ದೇವಾಲಯಕ್ಕೆ ಭೇಟಿ ನೀಡಿದ್ದು, ಶಿವನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಿಲಕ್ ವರ್ಮಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಪೋಟೋ ಹಂಚಿಕೊಂಡಿದ್ದಾರೆ.
