HEALTH TIPS

DOGE : ಭಾರತದಲ್ಲಿ ಮತದಾನ ಹೆಚ್ಚಳಕ್ಕೆ ಅಮೆರಿಕ ನಿಧಿ ಬಳಕೆ? ಮಾಜಿ ಚುನಾವಣಾ ಆಯುಕ್ತ ಕೊಟ್ಟ ಸ್ಪಷ್ಟನೆ ಏನು?

ನವದೆಹಲಿ: ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಅಮೆರಿಕದ ನಿಧಿಯನ್ನು ಬಳಸಲಾಗುತ್ತಿತ್ತು ಎಂದು ಇತ್ತೀಚೆಗೆ ಎಲಾನ್‌ ಮಸ್ಕ್‌ ನೇತೃತ್ವದ ಅಮೆರಿಕದ ದಕ್ಷತಾ ಇಲಾಖೆ (DOGE) ಹೇಳಿಕೆ ನೀಡಿತ್ತು. ಇದೀಗ ಈ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೇಷಿ ಅವರು, ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.

ಆಮೂಲಕ ಚುನಾವಣಾ ಆಯೋಗದ ಆಯುಕ್ತರಾಗಿದ್ದಾಗ ಭಾರತದಲ್ಲಿ ಮತದಾನವನ್ನು ಹೆಚ್ಚಿಸಲು ಅಮೆರಿಕದ ಏಜೆನ್ಸಿಯ ನಿಧಿಯನ್ನು ಬಳಸಲಾಗಿದೆ ಎಂಬ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.

DOGE ಹೇಳಿದ್ದೇನು?

ಶನಿವಾರ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದ DOGE ಅಮೆರಿಕದ ತೆರಿಗೆದಾರರ ದುಡ್ಡು ಕೆಲವು ವಿಷಯಗಳಿಗಾಗಿ ಅನವಶ್ಯಕವಾಗಿ ಹರಿದು ಹೋಗುತ್ತಿತ್ತು. ಅವುಗಳನ್ನು ತಡೆಹಿಡಿಯಲಾಗಿದೆ. 486 ಮಿಲಿಯನ್ ಡಾಲರ್​ ಚುನಾವಣಾ ಮತ್ತು ರಾಜಕೀಯ ಪ್ರಕ್ರಿಯೆ ಬಲವರ್ಧನೆಗಾಗಿ, ಎರಡು 22 ಮಿಲಿಯನ್ ಡಾಲರ್ ಮಾಲ್ಡೊವಾದ ರಾಜಕೀಯ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ಹಾಗೂ ಭಾಗವವಹಿಸುವುದಕ್ಕಾಗಿ ಮತ್ತು ಮೂರನೇಯದಾಗಿ 21 ಮಿಲಿಯನ್ ಡಾಲರ್ ಭಾರತದಲ್ಲಿ ಮತದಾನ ಹೆಚ್ಚಿಸುವುದಕ್ಕಾಗಿ. ಹೀಗೆ ಸುಖಾಸುಮ್ಮನೆ ಹರಿದು ಹೋಗುತ್ತಿದ್ದ ನಮ್ಮ ತೆರಿಗೆದಾರರ ಹಣವನ್ನು ತಡೆಹಿಡಿಯಲಾಗಿದೆ ಎಂದು ಹೇಳಿತ್ತು.

ಎಸ್‌ವೈ ಖುರೇಷಿ ಟಾಂಗ್‌

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೇಷಿ ನಾನು ಸಿಇಸಿ ಆಗಿದ್ದಾಗ 2012 ರಲ್ಲಿ ಭಾರತದಲ್ಲಿ ಮತದಾರರ ಪ್ರಮಾಣವನ್ನು ಹೆಚ್ಚಿಸಲು ಅಮೆರಿಕದ ಏಜೆನ್ಸಿಯಿಂದ ಕೆಲವು ಮಿಲಿಯನ್ ಡಾಲರ್‌ಗಳ ನಿಧಿಯನ್ನು ಪಡೆಯುವ ಬಗ್ಗೆ ಚುನಾವಣಾ ಆಯೋಗ ಮಾಡಿಕೊಂಡ ಒಪ್ಪಂದದ ಬಗ್ಗೆ ಕೆಲವು ಕಡೆ ವರದಿಯಾಗುತ್ತಿವೆ. ಆದರೆ ಇದು ಸತ್ಯಕ್ಕೆ ದೂರದವಾದ ಮಾತು. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿದ್ದಾರೆ.

2012 ರಲ್ಲಿ ತಾವು ಸಿಇಸಿ ಆಗಿದ್ದ ಅವಧಿಯಲ್ಲಿ, ಚುನಾವಣಾ ಆಯೋಗ ತರಬೇತಿ ಮತ್ತು ಸಂಪನ್ಮೂಲ ಕೇಂದ್ರವಾದ ಇಂಡಿಯಾ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಆಂಡ್ ಎಲೆಕ್ಷನ್ ಮ್ಯಾನೇಜ್ಮೆಂಟ್‌ನಲ್ಲಿ ಅಪೇಕ್ಷಿತ ದೇಶಗಳಿಗೆ ತರಬೇತಿ ನೀಡಲು ಇಂಟರ್ನ್ಯಾಷನಲ್ ಇಂಟರ್ನ್ಯಾಷನಲ್ ಫೌಂಡೇಶನ್ ಫಾರ್ ಎಲೆಕ್ಟೋರಲ್ ಸಿಸ್ಟಮ್ಸ್ (ಐಎಫ್‌ಇಎಸ್) ನೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಅವರು ಹೇಳಿದರು. ಈ ಒಪ್ಪಂದದಲ್ಲಿ ಯಾವುದೇ ನಿಧಿಯ ಉಲ್ಲೇಖವಾಗಿಲ್ಲ. ಈಗ ಹೇಳುತ್ತಿರುವುದು ಸಂಪೂರ್ಣವಾಗಿ ಸುಳ್ಳು ಮತ್ತು ದುರುದ್ದೇಶಪೂರಿತವಾಗಿದೆ ಎಂದು ಅವರು ಹೇಳಿದ್ದಾರೆ.

DOGE ಇಲಾಖೆಗೆ 22 ವರ್ಷದ ಆಕಾಶ್ ಬೋಬ್ಬಾ ಆಯ್ಕೆ

ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಗವರ್ನ್ಮೆಂಟ್ ಎಫಿಶಿಯನ್ಸಿಗೆ ಇತ್ತೀಚೆಗಷ್ಟೇ 19ರಿಂದ 25 ವರ್ಷ ವಯಸ್ಸಿನ ಆರು ಯುವಕರನ್ನು ನೇಮಕ ಮಾಡಲಾಗಿತ್ತು. ಭಾರತ ಮೂಲದ ಆಕಾಶ್ ಬೋಬ್ಬಾ ಈ ಅವರಲ್ಲಿ ಒಬ್ಬ. ಡೋಜೆ ಮುಖ್ಯಸ್ಥ ಹಾಗೂ ವಿಶ್ವದ ನಂಬರ್ ಒನ್ ಉದ್ಯಮಿ ಇಲಾನ್ ಮಸ್ಕ್ ಅವರ ಈ ನಡೆಗೆ ಹಲವರು ಅಚ್ಚರಿ ಪಟ್ಟಿದ್ದಾರೆ. ಇಲಾನ್ ಮಸ್ಕ್ ಅಡಿಯಲ್ಲಿ DOGEಗೆ (ಸರ್ಕಾರಿ ಕಾರ್ಯಕ್ಷಮತೆ ಇಲಾಖೆ) ಆಯ್ಕೆಯಾಗಿರುವ 6 ಯುವಕರಲ್ಲಿ ಆಕಾಶ್ ಕೂಡ ಒಬ್ಬರು. ಈ ಆರೂ ಯುವಕರ ವಯಸ್ಸು 19ರಿಂದ 24 ವರ್ಷ ಮಾತ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries