ಭಾರತದಲ್ಲಿ ಪ್ರತಿಯೊಂದು ಬಾರಿಗೆ ಹೊಸ ಸ್ಥಳಕ್ಕೆ ಹೋಗುವ ಮುಂಚೆ ಸಾಮಾನ್ಯವಾಗಿ ವಾಹನ ಸವಾರರು, ಪ್ರಯಾಣಿಕರು ಸೇರಿದಂತೆ ಹಲವರು ಗೂಗಲ್ ಮ್ಯಾಪ್ (Google Map) ಬಳಸುವುದು ಹವ್ಯಾಸವಾಗಿದೆ. ಇದರಿಂದ ನಾವು ತಲುಪಬೇಕಿರುವ ಜಾಗದ ಬಗ್ಗೆ ಒಂದಿಷ್ಟು ಮಾಹಿತಿಗಳೆಂದರೆ ನಿಗದಿತ ಸ್ಥಳ, ಲ್ಯಾಂಡ್ ಮಾರ್ಕ್ ಮತ್ತು ಪ್ರದೇಶದ ಹೆಸರನ್ನು ಪಡೆಯಲು ನೇರವಾಗುತ್ತವೆ. ಅಲ್ಲದೆ ಗೂಗಲ್‌ನ ಹಲವಾರು ಸೇವೆಗಳಲ್ಲಿ ಗೂಗಲ್ ಮ್ಯಾಪ್ ಸಹ ಅತಿ ಹೆಚ್ಚಾಗಿಯೂ ಬಳಕೆಯಾಗುವ ಫೀಚರ್‌ಗಳಲ್ಲಿ ಒಂದಾಗಿದೆ.
ಈ ಇಕೋ ಫ್ರೆಂಡ್ಲಿ ರೂಟ್ (Eco Friendly Route) ಹೇಗೆ ಕಾರ್ಯನಿರ್ವಹಿಸುತ್ತದೆ?
ಗೂಗಲ್ ಮ್ಯಾಪ್ ಈಗ ಇಕೋ ಫ್ರೆಂಡ್ಲಿ ರೂಟ್ (Eco Friendly Route) ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಮೊದಲಿಗೆ ಈ ಫೀಚರ್ ಒಳಗೊಂಡಿರುವ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ನಿಮಗೆ ಸುಲಭವಾಗಿ ಮತ್ತು ವೇಗವಾಗಿ ನಿಮ್ಮ ಸ್ಥಳವನ್ನು ತಲುಪಲು ನಿಮಗೆ ಎರಡು ಮಾರ್ಗಗಳನ್ನು ತೋರಿಸಲಿದೆ. ಮೊದಲನೆಯದು ಫಾಸ್ಟೆಸ್ಟ್ ರೂಟ್ ಮತ್ತೊಂದು ಇಕೋ ಫ್ರೆಂಡ್ಲಿ ರೂಟ್ ಆಗಿದೆ.

ಇವುಗಳ ರಸ್ತೆಯಲ್ಲಿ ಸಿಗುವ ಟ್ರಾಫಿಕ್ ಜಾಮ್, ರಸ್ತೆ ಕಾಮಗಾರಿ, ಗುಂಡಿ ಬಿದ್ದ ರಸ್ತೆಗಳ ಬದಲು ಬೇರೆ ರಸ್ತೆಗಳ ಮೂಲಕ ಹೆಚ್ಚು ಇಂಧನ ಖರ್ಚಾಗದಂತೆ ನಿಗದಿತ ಸ್ಥಳ ತಲುಪಿಸುವ ಮಾರ್ಗವನ್ನು ತೋರಿಸಲು ಹೆಚ್ಚು ಅನುಕೂಲವಾಗಲಿದೆ. ಇದರ ಮತ್ತೊಂದು ಬೆಸ್ಟ್ ಫೀಚರ್ ಅಂದ್ರೆ ನಿಮ್ಮ ವಾಹನ ಪೆಟ್ರೋಲ್, ಡೀಸೆಲ್, ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಮಾದರಿಯನ್ನು ಆಧರಿಸಿ ಈ ಫ್ರೆಂಡ್ಲಿ ರೂಟ್ ಮಾರ್ಗದ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.
Google Map ಇಕೋ ಫ್ರೆಂಡ್ಲಿ ರೂಟ್ ಫೀಚರ್ ಬಳಸುವುದು ಹೇಗೆ?
ಈ ಫೀಚರ್ ಅನ್ನು ನೀವು ಬಳಸಲು ಅತಿ ಸುಲಭವಾಗಿದ್ದು ಕೇವಲ ನಿಮಗೆ ನಿಮ್ಮ ಗೂಗಲ್ರ್ ಮ್ಯಾಪ್‌ನಲ್ಲಿ ಇಕೋ ಫ್ಲೆಂಡ್ಲಿ (Eco Friendly) ಎಂಬ ಬಟನ್ ಅನ್ನು ಆನ್ ಮಾಡಬೇಕಾಗುತ್ತದೆ ಅಷ್ಟೇ. ಇದರಲ್ಲಿ ರೂಟ್ ಆಪ್ಶನ್ ಆಯ್ಕೆ ಮಾಡಿಕೊಂಡರೆ ಫ್ಯೂಯೆಲ್ ಎಫೀಶಿಯನ್ಸಿ ಆಯ್ಕೆ ಲಭ್ಯವಾಗಲಿದೆ. ಇದನ್ನು ಟರ್ನ್ ಆನ್ ಮಾಡಿದಾಗ ನಿಮ್ಮ ವಾಹನದ ಎಂಜಿನ್ ಮಾದರಿಯ ವಿವರದೊಂದಿಗೆ ಪೆಟ್ರೋಲ್, ಡೀಸೆಲ್ ಎಂಜಿನ್ ಅಥವಾ ಹೈಬ್ರಿಡ್-ಎಲೆಕ್ಟ್ರಿಕ್ ಎಂಜಿನ್ ಅನ್ನೋದನ್ನು ಉಲ್ಲೇಖಿಸಬೇಕಾಗುತ್ತದೆ. ನಂತರ ಇದಕ್ಕೆ ತಕ್ಕಂತೆ ನೀವು ಪ್ರಯಾಣಿಸಬೇಕಾದ ಇಕೋ ಫ್ಲೆಂಡ್ಲಿ ಮಾರ್ಗದಲ್ಲಿ ನಿಮಗೆ ತಗಲುವ ಇಂಧನ ಲಾಭವನ್ನು ಗೂಗಲ್ ಮ್ಯಾಪ್ AI ತಂತ್ರಜ್ಞಾನ ಬಳಸಿಕೊಂಡು ನಿಮಗೆ ಅಂದಾಜು ಮಾಡಿಕೊಡುತ್ತದೆ.