ಕೀವ್: ಉಕ್ರೇನ್‌ನ ರಾಜಧಾನಿ ಮತ್ತು ಇತರ ಪ್ರದೇಶಗಳ ಮೇಲೆ ರಷ್ಯಾವು ಇಂದು (ಸೋಮವಾರ) ಡ್ರೋನ್ ದಾಳಿ ನಡೆಸಿದೆ.
ಶೇಖರಣಾ ಸೌಲಭ್ಯಗಳು ಮತ್ತು ಖಾಸಗಿ ನಿವಾಸಗಳನ್ನು ಗುರಿಯಾಗಿಸಿ ರಷ್ಯಾವು 147 ಡ್ರೋನ್‌ಗಳನ್ನು ಉಡಾಯಿಸಿದೆ. ಆ ಪೈಕಿ 83 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.
59 ಹೆಚ್ಚು ಡ್ರೋನ್‌ಗಳು ಗುರಿ ತಲುಪುವಲ್ಲಿ ವಿಫಲವಾಗಿದ್ದು, ಇನ್ನುಳಿದ ಐದು ಡ್ರೋನ್‌ಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಉಕ್ರೇನ್ ಸೇನೆ ತಿಳಿಸಿದೆ.
ಕೀವ್ ಪ್ರದೇಶದಲ್ಲಿರುವ ಕೆಲವು ಕೈಗಾರಿಕೆಗಳಿಗೆ ಡ್ರೋನ್‌ಗಳು ಅಪ್ಪಳಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿದ್ದು, ನಂದಿಸಲಾಗಿದೆ. ನಾಲ್ಕು ಖಾಸಗಿ ನಿವಾಸಗಳಿಗೆ ಹಾನಿಯಾಗಿದ್ದು, ನಾಗರಿಕರೊಬ್ಬರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಮೈಕೋಲಾ ಕಲಾಶ್ನಿಕ್ ಹೇಳಿದ್ದಾರೆ.
ಕಳೆದ ವಾರ ಭಾರಿ ಸ್ಫೋಟ ಸಾಮರ್ಥ್ಯದ ಸಿಡಿತಲೆ ಅಳವಡಿಸಿದ್ದ ರಷ್ಯಾದ ಡ್ರೋನ್, ಕೀವ್‌ನ ಸಂರಕ್ಷಿತ ಚೆರ್ನೋಬಿಲ್ ಅಣು ವಿದ್ಯುತ್ ಸ್ಥಾವರ ಸಂಕೀರ್ಣಕ್ಕೆ ಅಪ್ಪಳಿಸಿತ್ತು.