ಬ್ಲಾಕ್ ಮಾಡಿದ್ದು ಹೇಗೆ ತಿಳಿಯುವುದು?
ಸಾಮಾನ್ಯವಾಗಿ ಯಾರಾದರೂ ನಮ್ಮನ್ನು ಬ್ಲಾಕ್ ಮಾಡಿದರೆ ಅವರ ಪ್ರೊಫೈಲ್ ಚಿತ್ರ ಕಾಣುವುದಿಲ್ಲ. ಅವರು ಹಾಕುವ ಸ್ಟೇಟಸ್‌ಗಳು ಕೂಡ ಕಾಣುವುದಿಲ್ಲ. ನೀವು ಅವರಿಗೆ ಮೆಸೇಜ್ ಕಳಿಸಿದರೆ ಬ್ಲೂ ಟಿಕ್ ಕಾಣುವುದಿಲ್ಲ. ನೀವು ಕರೆ ಮಾಡಿದರೂ ಅವರಿಗೆ ರಿಂಗ್ ಆಗುವುದಿಲ್ಲ. ಇವುಗಳ ಮೂಲಕ ಒಬ್ಬ ವ್ಯಕ್ತಿ ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದು ತಿಳಿಯಬಹುದು. ಹಾಗಾದರೆ ಬ್ಲಾಕ್ ಮಾಡಿದವರಿಗೆ ಮೆಸೇಜ್ ಕಳಿಸುವುದು ಹೇಗೆ?

ಖಾತೆಯನ್ನು ಅಳಿಸಿ
ನಿಮ್ಮನ್ನು ಬ್ಲಾಕ್ ಮಾಡಿದವರಿಗೆ ಮೆಸೇಜ್ ಕಳಿಸಲು ಮೊದಲು ನಿಮ್ಮ WhatsApp ಖಾತೆಯನ್ನು ಅಳಿಸಬೇಕು. ನಂತರ ನಿಮ್ಮ ಫೋನ್ ಸಂಖ್ಯೆಯಿಂದ ಮತ್ತೆ WhatsApp ಖಾತೆಯನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ನೀವು ಸ್ವಯಂಚಾಲಿತವಾಗಿ ಅನ್‌ಬ್ಲಾಕ್ ಆಗುತ್ತೀರಿ. ಆಗ ನೀವು ಕಳಿಸುವ ಮೆಸೇಜ್ ಅವರಿಗೆ ಹೋಗುತ್ತದೆ. ಅವರ ಡಿಪಿ, ಸ್ಟೇಟಸ್‌ಗಳು ಕಾಣುತ್ತವೆ. ಆದರೆ ಖಾತೆಯನ್ನು ಡೀಆಕ್ಟಿವೇಟ್ ಮಾಡಿದರೆ ನಿಮ್ಮ ಹಳೆಯ ಚಾಟ್‌ಗಳನ್ನು ನೋಡಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಖಾತೆಯನ್ನು ಅಳಿಸಬೇಕು. ಖಾತೆಯನ್ನು ಅಳಿಸಲು ಸೆಟ್ಟಿಂಗ್ಸ್‌ಗೆ ಹೋಗಿ 'ನನ್ನ ಖಾತೆಯನ್ನು ಅಳಿಸಿ' ಆಯ್ಕೆಯನ್ನು ಆರಿಸಿದರೆ ಸಾಕು.

ಗುಂಪು ರಚಿಸಿ
ನಿಮ್ಮನ್ನು ಬ್ಲಾಕ್ ಮಾಡಿದವರ ಜೊತೆ ಚಾಟ್ ಮಾಡಲು ಅವರನ್ನು ಗುಂಪಿಗೆ ಸೇರಿಸಬೇಕು. ಇದಕ್ಕೆ ಮೂರನೇ ವ್ಯಕ್ತಿಯ ಸಹಾಯ ಅಥವಾ ನಿಮಗೆ ಇನ್ನೊಂದು WhatsApp ಸಂಖ್ಯೆ ಇದ್ದರೆ ಸಾಕು. ನಿಮ್ಮ ಜೊತೆಗೆ ನಿಮ್ಮನ್ನು ಬ್ಲಾಕ್ ಮಾಡಿದ ವ್ಯಕ್ತಿ ಮತ್ತು ಮೂರನೇ ಸಂಖ್ಯೆಯನ್ನು ಸೇರಿಸಿ ಗುಂಪು ರಚಿಸಿ. ಹೀಗೆ ಮಾಡಿದರೆ ನಿಮ್ಮನ್ನು ಬ್ಲಾಕ್ ಮಾಡಿದವರು ಕೂಡ ಆ ಗುಂಪಿನಲ್ಲಿ ಇರುತ್ತಾರೆ. ಆಗ ನೀವು ಗುಂಪಿನಲ್ಲಿ ಕಳಿಸುವ ಮೆಸೇಜ್ ಅವರಿಗೆ ಕಾಣುತ್ತದೆ.