HEALTH TIPS

ಏಪ್ರಿಲ್ 1ರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಮಹತ್ತರ ಬದಲಾವಣೆ: ATM ಕ್ಯಾಷ್ ವಿತ್​ಡ್ರಾ ಶುಲ್ಕ ಹೆಚ್ಚಳ; SB ಖಾತೆ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ!

ನವದೆಹಲಿ: ಏಪ್ರಿಲ್ 1 ರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ತರ ಬದಲಾವಣೆ ತಂದಿದ್ದು, ATM ಕ್ಯಾಷ್ ವಿತ್​ಡ್ರಾ ಶುಲ್ಕ ಹೆಚ್ಚಳ, SB ಖಾತೆ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ ಸೇರಿದಂತೆ ಹಲವು ನಿಯಮಗಳಲ್ಲಿ ಪರಿಷ್ಕರಣೆ ತಂದಿದೆ.

ಹೌದು.. 2025ರ ಏಪ್ರಿಲ್ 1ರಿಂದ ಹೊಸ ಬ್ಯಾಂಕಿಂಗ್ ನಿಯಮಗಳು ಜಾರಿಗೆ ಬರುತ್ತಿದ್ದು, ಎಟಿಎಂ ಹಣ ಹಿಂಪಡೆಯುವಿಕೆ, ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮಗಳಲ್ಲಿ ಆರ್ ಬಿಐ ಸಾಕಷ್ಟು ಬದಲಾವಣೆ ಮಾಡಿದೆ. ಎಟಿಎಂ ಹಣ ವಿತ್ ಡ್ರಾಗೆ ಸಂಬಂಧಿಸಿದಂತೆ ವಿಧಿಸುತ್ತಿದ್ದ ಶುಲ್ಕ ಹೆಚ್ಚಳ, ಸೇರಿದಂತೆ ಕೆಲ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ನಿಯಮಗಳವರೆಗೆ ಬದಲಾವಣೆಗಳಾಗುತ್ತಿವೆ.

ರಾಷ್ಟ್ರೀಯ ಪಾವತಿ ನಿಗಮ (NPCI) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್, ಮೇ 1, 2025 ರಿಂದ ಜಾರಿಗೆ ಬರುವಂತೆ ನಗದು ಹಿಂಪಡೆಯುವಿಕೆಗಾಗಿ ATM ಇಂಟರ್‌ಚೇಂಜ್ ಅನ್ನು 17 ರೂ.ಗಳಿಂದ 19 ರೂ.ಗಳಿಗೆ ಹೆಚ್ಚಿಸಲು ಅನುಮೋದನೆ ನೀಡಿವೆ.

ದೇಶೀಯ ಹಣಕಾಸು ಮತ್ತು ಹಣಕಾಸುಯೇತರ ವಹಿವಾಟುಗಳಿಗೆ ಇಂಟರ್‌ಚೇಂಜ್ ಅನ್ನು ಪರಿಷ್ಕರಿಸಲಾಗಿದೆ. ಮಾರ್ಚ್ 13 ರ NPCI ಸುತ್ತೋಲೆಯ ಪ್ರಕಾರ, ಹಣಕಾಸುಯೇತರ ವಹಿವಾಟುಗಳು 7 ರೂ.ಗಳ ಇಂಟರ್‌ಚೇಂಜ್‌ಗೆ ಒಳಪಟ್ಟಿರುತ್ತವೆ. ಬ್ಯುಸಿನೆಸ್ ಸ್ಟ್ಯಾಂಡರ್ಡ್, ರಾಷ್ಟ್ರೀಯ ಹಣಕಾಸು ಸ್ವಿಚ್ (NFS) ATM ನೆಟ್‌ವರ್ಕ್‌ನ ಸದಸ್ಯರಿಗೆ ಕಳುಹಿಸಲಾದ ಪತ್ರವನ್ನು ಪರಿಶೀಲಿಸಿದೆ. ಇಂಟರ್‌ಚೇಂಜ್ ದರದ ಮೇಲೆ ಪ್ರತ್ಯೇಕ GST ವಿಧಿಸಲಾಗುತ್ತದೆ.

ಎಟಿಎಂ ಕ್ಯಾಷ್ ವಿತ್​​ಡ್ರಾ ಶುಲ್ಕ

ಬಹುತೇಕ ಎಲ್ಲಾ ಬ್ಯಾಂಕುಗಳು ಇಂಟರ್​​ಚೇಂಜ್ ಶುಲ್ಕಗಳನ್ನು ಹೆಚ್ಚಿಸಿವೆ. ಎಟಿಎಂಗಳಲ್ಲಿ ಅನುಮತಿಸಿದ ಮಿತಿಗಿಂತ ಹೆಚ್ಚು ಬಾರಿ ಹಣ ವಿತ್​​ಡ್ರಾ ಮಾಡಿದರೆ ಶುಲ್ಕ ಕಟ್ಟಬೇಕಾಗುತ್ತದೆ. ಈ ಶುಲ್ಕದ ದರವನ್ನು ಇದೀಗ ಹೆಚ್ಚಿಸಲಾಗಿದೆ. ಮೇ 1ರಿಂದ ಈ ನಿಯಮ ಜಾರಿಗೆ ಬರಲಿದೆ. ನಿಗದಿತ ಮಿತಿಯನ್ನು ಮೀರಿ ಹೆಚ್ಚು ಬಾರಿ ವಿತ್ ಡ್ರಾ ಮಾಡಿದರೆ ಆಗ ಪ್ರತೀ ಹೆಚ್ಚುವರಿ ಟ್ರಾನ್ಸಾಕ್ಷನ್​ಗೂ ನಿರ್ದಿಷ್ಟ ಶುಲ್ಕ ಇರುತ್ತದೆ. ಮೇ 1ರಿಂದ ಈ ಶುಲ್ಕದಲ್ಲಿ 1-2 ರೂ ಹೆಚ್ಚಳ ಮಾಡಲಾಗುತ್ತಿದೆ. ಕ್ಯಾಷ್ ವಿತ್​ಡ್ರಾ ಮಾಡಿದರೆ ವಿಧಿಸುವ ಶುಲ್ಕವನ್ನು 17 ರೂನಿಂದ 19 ರೂಗೆ ಹೆಚ್ಚಿಸಲಾಗುತ್ತಿದೆ. ಅಕೌಂಟ್ ಬ್ಯಾಲನ್ಸ್ ಪರಿಶೀಲನೆ ಸೇರಿದಂತೆ ನಾನ್-ಟ್ರಾನ್ಸಾಕ್ಷನ್ ಶುಲ್ಕ 6 ರೂ ಇದ್ದದ್ದು 7 ರೂ ಆಗುತ್ತದೆ ಎಂದು ಹೇಳಲಾಗಿದೆ.

ಮಿನಿಮಮ್ ಬ್ಯಾಲನ್ಸ್ ಶುಲ್ಕ

ಅಂತೆಯೇ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ SBI, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಮೊದಲಾದ ಪ್ರಮುಖ ಬ್ಯಾಂಕುಗಳು ತಮ್ಮ ಮಿನಿಮಮ್ ಬ್ಯಾಲನ್ಸ್ ನಿಯಮಗಳನ್ನು ಪರಿಷ್ಕರಿಸುತ್ತಿವೆ. ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೇರೆ ಬೇರೆ ಮಿನಿಮಮ್ ಬ್ಯಾಲನ್ಸ್ ನಿಯಮಗಳನ್ನು ಅಳವಡಿಸಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries