ನೀವು ಹೊಸ ವಾಚ್ ಕೊಂಡುಕೊಂಡರೂ, ಹೊಸ ಗಡಿಯಾರ ಕೊಂಡುಕೊಂಡರೂ ಅದರಲ್ಲಿ ಸ್ಟಾರ್ಟಿಂಗ್ ಟೈಮ್ 10-10 ಯಾಕೆ ತೋರಿಸುತ್ತೆ ಗೊತ್ತಾ? ಈ ವಿಷಯದ ಬಗ್ಗೆ ತುಂಬಾ ಕಥೆಗಳು ಓಡಾಡುತ್ತಿವೆ. ಆದರೆ ಅವುಗಳಲ್ಲಿ ನಿಜವಾದ ಕಾರಣ ಏನು ಅಂತ ಈಗ ತಿಳಿಯೋಣ.
ನೀವು ಹೊಸದಾಗಿ ವಾಲ್ ಕ್ಲಾಕ್ ಕೊಳ್ಳೋಕೆ ಅಂಗಡಿಗೆ ಹೋದ್ರಿ ಅಂದುಕೊಳ್ಳಿ.
ಅಲ್ಲಿ ಕಾಣಿಸುವ ಹೊಸ ಗಡಿಯಾರಗಳೆಲ್ಲಾ ಒಂದೇ ಟೈಮ್ ತೋರಿಸ್ತಾವೆ. ಅದೇ 10-10. ಅಲ್ವಾ? ಯಾವತ್ತಾದ್ರೂ ಯೋಚನೆ ಮಾಡಿದೀರಾ? ಪ್ರತಿ ಗಡಿಯಾರ ಹೀಗೆ 10-10 ಟೈಮ್ ಮಾತ್ರ ಯಾಕೆ ತೋರಿಸುತ್ತೆ ಅಂತ? ಇದಕ್ಕೆ ತುಂಬಾ ಜನ ತುಂಬಾ ಕಾರಣ ಹೇಳ್ತಾರೆ. ಅವುಗಳಲ್ಲಿ ಕೆಲವನ್ನು ಈಗ ತಿಳಿಯೋಣ.
ಈವರೆಗೆ ಓಡಾಡುತ್ತಿರುವ ವಿಷಯ ಏನಂದ್ರೆ.. ಸಾಮಾನ್ಯವಾಗಿ 10-10 ಅನ್ನೋದು ತುಂಬಾ ಒಳ್ಳೆಯ ಸಮಯ. ಅದಕ್ಕೆ ಆ ಟೈಮ್ ಅನ್ನೇ ಪ್ರತಿ ಗಡಿಯಾರದಲ್ಲಿ ಸೆಟ್ ಮಾಡಿ ಇಟ್ಟಿರುತ್ತಾರೆ ಅಂತ ತುಂಬಾ ಜನ ಅಂದುಕೊಳ್ಳುತ್ತಾರೆ.
ಹಾಗೆಯೇ ಮೊದಲನೇ ಬಾರಿ ಗಡಿಯಾರ ಸಕ್ಸೆಸ್ಫುಲ್ ಆಗಿ ರೆಡಿ ಆಗೋ ಅಷ್ಟರಲ್ಲಿ ಕರೆಕ್ಟ್ ಆಗಿ ಟೈಮ್ 10-10 ಆಗಿತ್ತಂತೆ, ಅದಕ್ಕೆ ಪ್ರತಿಯೊಂದು ಹೊಸ ಗಡಿಯಾರದಲ್ಲೂ ಅದೇ ಟೈಮ್ ಸೆಟ್ ಮಾಡಿ ಇಟ್ಟಿರುತ್ತಾರೆ ಅಂತ ಅಂದುಕೊಳ್ಳುತ್ತಾರೆ.
ಇವೆಲ್ಲಾ ಊಹೆಗೂ ಮೀರಿದ ಕಥೆಗಳು ಮಾತ್ರ. ನಿಜವಾಗಿ ಗಡಿಯಾರದಲ್ಲಿ 10-10 ಟೈಮ್ ಇರೋದಕ್ಕೆ ಕೆಲವು ವಿಶೇಷವಾದ ಬಿಸಿನೆಸ್ ಕೋನಗಳಿವೆ.
ಗಡಿಯಾರದಲ್ಲಿ 10-10 ಟೈಮ್‌ನಲ್ಲಿ ಕಾಣಿಸುವ ದೊಡ್ಡ ಮುಳ್ಳು, ಚಿಕ್ಕ ಮುಳ್ಳು ವಿಕ್ಟರಿ ಸಿಂಬಲ್ ಅನ್ನು ತೋರಿಸುತ್ತವೆ. ಅಂದ್ರೆ V ಶೇಪ್‌ನಲ್ಲಿ ಇರುತ್ತವೆ. V ಶೇಪ್ ಅಂದ್ರೆ ಚಿಕ್ಕ ಮುಳ್ಳು 10 ಹತ್ತಿರ, ದೊಡ್ಡ ಮುಳ್ಳು 2 ಹತ್ತಿರನೇ ಯಾಕೆ ಇರಬೇಕು? 11 ಹತ್ತಿರ, 1 ಹತ್ತಿರ ಇರಬಹುದಲ್ಲ? ಇದಕ್ಕೆ ಒಂದು ವಿಶೇಷ ಕಾರಣ ಇದೆ.
ತುಂಬಾ ಗಡಿಯಾರಗಳು 10-10 ಟೈಮ್ ತೋರಿಸೋ ಎರಡು ಪಾಯಿಂಟರ್ಸ್ ಮಧ್ಯೆ ಆ ವಾಚ್ ಅಥವಾ ಕ್ಲಾಕ್ ತಯಾರಿಸಿದ ಕಂಪನಿಯ ಹೆಸರು ಇರುತ್ತದೆ. ಆ ಹೆಸರು ಕ್ಲಿಯರ್ ಆಗಿ ಕಾಣಿಸಬೇಕು ಅಂತ ಈ ಎರಡು ಪಾಯಿಂಟರ್ಸ್ ಮಧ್ಯೆ ಅಷ್ಟು ಗ್ಯಾಪ್ ಇಟ್ಟಿರುತ್ತಾರೆ.
ಇನ್ನೊಂದು ಕಾರಣ ಏನಂದ್ರೆ.. ಪ್ರತಿ ಹೊಸ ಗಡಿಯಾರದಲ್ಲಿ ಎರಡು ಮುಳ್ಳುಗಳು ಸ್ಮೈಲಿ ಸಿಂಬಲ್ ಅನ್ನು ತೋರಿಸುತ್ತವೆ. ಇದು ಗಡಿಯಾರ ಕೊಳ್ಳೋಕೆ ಬಂದ ಕಸ್ಟಮರ್ ಅನ್ನು ಆಕರ್ಷಿಸುತ್ತದೆ. ಅದೇ ಎರಡು ಪಾಯಿಂಟರ್ಸ್ ಡೌನ್ ಆಗಿ ಇದ್ರೂ, ಮೇಲಕ್ಕೆ ಇದ್ರೂ ಅಷ್ಟಾಗಿ ಆಕರ್ಷಣೀಯವಾಗಿ ಇರೋದಿಲ್ಲ. ಅದೇ ಸ್ಮೈಲಿ ಶೇಪ್‌ನಲ್ಲಿ ಇರೋದ್ರಿಂದ ನೋಡಿದ ತಕ್ಷಣ ಕಂಪನಿ ಹೆಸರು ಕೂಡ ಅಲ್ಲೇ ಕಾಣಿಸುತ್ತದೆ. ಇದರಿಂದ ಆಟೋಮೆಟಿಕ್ ಆಗಿ ಗಡಿಯಾರ ಕೊಳ್ಳಬೇಕು ಅನ್ನೋ ಆಲೋಚನೆ ಬರುತ್ತೆ. ಇವು ಹೊಸ ಗಡಿಯಾರದಲ್ಲಿ ದೊಡ್ಡ ಮುಳ್ಳು, ಚಿಕ್ಕ ಮುಳ್ಳು ಮಧ್ಯೆ ಇರುವ ಸ್ಟೋರಿ.