ಚೆನ್ನೈ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಾಜ್ಯ ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಇಲಾಖೆಯ ಪರವಾಗಿ ಮಹಿಳಾ ಫಲಾನುಭವಿಗಳಿಗೆ 100 ಗುಲಾಬಿ (ಪಿಂಕ್) ಆಟೊಗಳನ್ನು ವಿತರಿಸಿದ್ದಾರೆ.
ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, 'ಕಾಂಚೀಪುರಂ, ಈರೋಡ್, ಧರ್ಮಪುರಿ, ಶಿವಗಂಗಾ, ಥೇಣಿ, ಕಡಲೂರು, ನಾಗಪಟ್ಟಣಂ, ರಾಣಿಪೇಟ್ ಮತ್ತು ಕರೂರ್ ಜಿಲ್ಲೆಗಳಲ್ಲಿ ₹72 ಕೋಟಿ ವೆಚ್ಚದಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ ಹೊಸ ವಸತಿ ನಿಲಯಗಳನ್ನು ನಿರ್ಮಿಸಲಾಗುವುದು' ಎಂದು ಘೋಷಿಸಿದ್ದಾರೆ.