ಮಾಸ್ಕೊ: ರಷ್ಯಾದ ಸರತೊಫ್ ವಲಯದಲ್ಲಿ ಸೇನಾ ನೆಲೆ ಗುರಿಯಾಗಿಸಿ ಉಕ್ರೇನ್ ಸೇನೆ ನಡೆಸಿದ ಡ್ರೋನ್ ದಾಳಿಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ.
ದಾಳಿಯಿಂದ ದೊಡ್ಡ ಸ್ಫೋಟ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸ್ಥಳೀಯ ಟಿ.ವಿ. ವರದಿ ಮಾಡಿದೆ.
ಡ್ರೋನ್ ದಾಳಿಯಿಂದಾಗಿ ಈ ವಲಯದ ಎಂಗಲ್ಸ್ ಜಿಲ್ಲಾ ವ್ಯಾಪ್ತಿಯಲ್ಲಿ ರಷ್ಯಾ ಸರ್ಕಾರವು ತುರ್ತು ಸ್ಥಿತಿಯನ್ನು ಘೋಷಿಸಿತ್ತು.