ಬದಿಯಡ್ಕ: ಮವ್ವಾರು ಶ್ರೀಕೃಷ್ಣ ಭಜನ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಸಾರ್ವರ್ಜನಿಕ ಶ್ರೀಸತ್ಯನಾರಾಯಣ ಪೂಜೆಯು ಮಾ.11ರಂದು ಬ್ರಹ್ಮಶ್ರೀ ಡಾ. ಮಾಧವ ಉಪಾಧ್ಯಾಯ ಬಳ್ಳಪದವು ಇವರ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇದರಂಗವಾಗಿ ಮಾ.11ರಂದು ಬೆಳಗ್ಗೆ ದೀಪ ಪ್ರತಿμÉ್ಠ, ಗಣಪತಿ ಹೋಮ, ಶ್ರೀ ಮಂದಿರ ಮುಂಭಾಗದ ಶಾಶ್ವತ ಚಪ್ಪರ ಲೋಕಾರ್ಪಣೆ, ಭಜನೆ, ಬಳಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, ನಾಗಸನ್ನಿಽಯಲ್ಲಿ ಕ್ಷೀರಾಭಿμÉೀಕ, ಸೀಯಾಳಭಿμÉೀಕ, ಅರಸಿನಾರ್ಚನೆ, ನಾಗತಂಬಿಲ, ಮಧ್ಯಾಹ್ನ ಮಹಾಪೂಜೆ, ಮಂಗಲಂ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಶ್ರೀಕೃಷ್ಣ ಭಜನ ಮಂದಿರದ ಸೇವಾ ಸಮಿತಿ ಅಧ್ಯಕ್ಷ ಗಂಗಾಧರ ರೈ ಮಠದಮೂಲೆ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಉಪನ್ಯಾಸವನ್ನು ಸರಕಾರಿ ಕಾಲೇಜು ಉಪನ್ಯಾಸಕ ಡಾ. ರಾಧಾಕೃಷ್ಣ ಬೆಳ್ಳೂರು ಮಾಡುವರು. ಈ ಸಂದರ್ಭದಲ್ಲಿ ಹರಿನಾರಾಯಣ ಶಿರಂತ್ತಡ್ಕ, ಎಸ್.ಎನ್.ಮಯ್ಯ ಭಾಗವಹಿಸುವರು. ನಾರಾಯಣ ಎಂ. ಮಲ್ಲಮೂಲೆ, ನಿಶಾಂತ್ ರೈ ಪಿ. ಮವ್ವಾರು, ನಾಗರಾಜ ಭಟ್ ಮಠದಮೂಲೆ ಮತ್ತಿತರರು ಉಪಸ್ಥಿತರಿರುವರು.
ಸಂಜೆ ಶ್ರೀಕೃಷ್ಣ ಭಜನ ಮಂದಿರದ ಮಾತೃಮಂಡಳಿ ಸದಸ್ಯೆಯರಿಂದ ತಿರುವಾದಿರ ಮತ್ತು ಕೈಕೊಟ್ಟಿಕಳಿ ಪ್ರದರ್ಶನಗೊಳ್ಳಲಿದೆ. ಬಳಿಕ ಕಣಿತ ಭಜನೆ, ಸಂಜೆ ಪಾಂಚಜನ್ಯ ಮಿತ್ರ ವೃಂದ ಮವ್ವಾರು ಪ್ರಾಯೋಜಕತ್ವದಲ್ಲಿ ಶ್ರೀ ಕೋದಂಡರಾಮ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ಪಾಂಚಜನ್ಯ-ಗುರುದಕ್ಷಿಣೆ ಯಕ್ಷಗಾನ ಬಯಲಾಟ ನಡೆಯಲಿದೆ.