ಕೊಚ್ಚಿ: ಖ್ಯಾತ ಬರಹಗಾರ 98ರ ಹರೆಯದ ಪ್ರೊ. ಸನು ಮಾಸ್ತರ್ ಅವರು ಲುಲು ಮಾಲ್ ನೋಡಿ ಅಚ್ಚರಿಪಟ್ಟು ಹೊಗಳಿರುವುದು ವೈರಲ್ ಆಗಿದೆ.
ಪ್ರೊ.ಸನು ಮಾಸ್ತರ್ ಲುಲು ಮಾಲ್‍ನ 12 ನೇ ವಾರ್ಷಿಕೋತ್ಸವ ಆಚರಣೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಲುಲು ಮಾಲ್ ಅಧಿಕೃತರು ಸನು ಮಾಸ್ತರ್ ಅವರನ್ನು ಕೈ ಹಿಡಿದು ಮಾಲ್ ಒಳಗೆ ಸ್ವಾಗತಿಸಿದರು. ನಂತರ, ಮಾಧ್ಯಮ ಮುಖ್ಯಸ್ಥ ಎನ್.ಬಿ.ಸ್ವರಾಜ್ ಅವರ ಕೈ ಹಿಡಿದು ಒಂದು ಗಂಟೆಗೂ ಹೆಚ್ಚು ಕಾಲ ಮಾಲ್ ನೊಳಗೆ ನಡೆದಾಡಿದರು. ವಿದ್ಯುತ್ ವೀಲ್‍ಚೇರ್‍ನಲ್ಲಿ ಚಲಿಸುವ ವಿನಂತಿಯನ್ನು ಪ್ರೀತಿಯಿಂದ ನಿರಾಕರಿಸಿ ಮಾಲ್ ತುಂಬ ನಡೆದಾಡಿದರು.
ಈ ಸಂದಭ್ ಹಲವರು ಮಾಸ್ತರ್ ಅವರೊಂದಿಗೆ ಸೆಲ್ಫಿ ಸೆಗೆಸಿಕೊಂಡರು. ಲುಲು ಪ್ರಾದೇಶಿಕ ನಿರ್ದೇಶಕ ಸಾದಿಕ್ ಖಾಸಿಮ್ ಮತ್ತು ಲುಲು ಇಂಡಿಯಾ ಮಾಧ್ಯಮ ಮುಖ್ಯಸ್ಥ ಎನ್.ಬಿ. ಸ್ವರಾಜ್ ಮಾಲ್‍ನ ಮಾಹಿತಿ ನೀಡಿ ವಿವರಿಸಿದರು. ಲುಲು ಬಗ್ಗೆ, ಪ್ರತಿಯೊಂದು ದೃಶ್ಯವನ್ನು ಕಂಡ ಲುಲು ಗ್ರೂಪ್ ಅಧ್ಯಕ್ಷ ಎಂ.ಎ. ಯೂಸುಫ್ ಅಲಿ ಅವರ ನೆನಪುಗಳನ್ನು ಅವರು ಹಂಚಿಕೊಂಡರು.
ನಂತರ ನಡೆದ ವಾರ್ಷಿಕೋತ್ಸವದಲ್ಲಿ, ಲುಲು ಗ್ರೂಪ್ ಇಂಡಿಯಾ ಸಿಇಒ ಮತ್ತು ನಿರ್ದೇಶಕ ಎಂ.ಎ. ನಿಶಾದ್ ಅವರು ಸನುಮಾಸ್ತರ್ ಅವರಿಗೆ ಹಾರ ಮತ್ತು ಉಡುಗೊರೆಯನ್ನು ನೀಡಿ ಗೌರವಿಸಿದರು. ನಂತರ ಸನುಮಾಸ್ತರ್ ಬೃಹತ್ ಕೇಕ್ ಕತ್ತರಿಸುವ ಮೂಲಕ 12 ನೇ ವಾರ್ಷಿಕೋತ್ಸವ ಆಚರಣೆಯನ್ನು ಉದ್ಘಾಟಿಸಿದರು. ವಿಶ್ವಪ್ರಸಿದ್ಧ ಲುಲು ಮಾಲ್ ಅನ್ನು ಅತ್ಯಂತ ಪರಿಣಿತ ರೀತಿಯಲ್ಲಿ ನಿರ್ವಹಿಸುವಲ್ಲಿ ಎಂಎ ಯೂಸುಫ್ ಅಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು. ವಾಣಿಜ್ಯವು ಒಂದು ದೇಶದ ಜೀವಾಳ. ಆ ವಾಣಿಜ್ಯ ಜಗತ್ತಿನಲ್ಲಿ ಎಂ.ಎ. ಯೂಸುಫಾಲಿ ಒಬ್ಬ ವಿಶಿಷ್ಟ ವ್ಯಕ್ತಿಯಾದವರೆಂದು ತಿಳಿಸಿದರು.
ಲುಲುವನ್ನು ಕೌಶಲ್ಯದಿಂದ ಮತ್ತು ಆಕರ್ಷಕವಾಗಿ ನಡೆಸುವ ಮತ್ತು ಪ್ರಪಂಚದಾದ್ಯಂತ ಹರಡಿರುವ ವಿಧಾನವು ಅದರ ಕಾರ್ಯಾಚರಣಾ ವಿಧಾನಗಳ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು. ನೌಕರರು ಮಾತ್ರವಲ್ಲ, ಸರಕುಗಳನ್ನು ಖರೀದಿಸಲು ಬರುವವರು ಸಹ ಮಾಲ್‍ನ ಫಲಾನುಭವಿಗಳಾಗಿದ್ದಾರೆ. ಕಳೆದ 12 ವರ್ಷಗಳಲ್ಲಿ 220 ಮಿಲಿಯನ್ ಜನರು ಲುಲು ಮಾಲ್‍ಗೆ ಭೇಟಿ ನೀಡಿದ್ದಾರೆ ಎಂಬುದು ನಂಬಲಾಗದ ಸಂಗತಿ ಎಂದು ಅವರು ಹೇಳಿದರು.
ಲುಲು ಇಂಡಿಯಾ ಸಿಇಒ ಮತ್ತು ನಿರ್ದೇಶಕ ಎಂ.ಎ. ನಿಶಾದ್, ಲುಲು ಮಾಲ್ಸ್ ಇಂಡಿಯಾ ನಿರ್ದೇಶಕ ಶಿಬು ಫಿಲಿಪ್, ಲುಲು ಪ್ರಾದೇಶಿಕ ನಿರ್ದೇಶಕ ಸಾದಿಕ್ ಖಾಸಿಂ, ಲುಲು ಇಂಡಿಯಾ ಮಾಧ್ಯಮ ಮುಖ್ಯಸ್ಥ ಎನ್.ಬಿ. ಸ್ವರಾಜ್, ಲುಲು ಇಂಡಿಯಾ ಹೈಪರ್ ಮಾರ್ಕೆಟ್ ಜನರಲ್ ಮ್ಯಾನೇಜರ್ ಸುಧೀಶ್ ನಾಯರ್, ಕೊಚ್ಚಿ ಲುಲು ಮಾಲ್ ಜನರಲ್ ಮ್ಯಾನೇಜರ್ ವಿಷ್ಣು ಆರ್. ನಾಥ್, ಲುಲು ಹೈಪರ್ ಮಾರ್ಕೆಟ್ ಜನರಲ್ ಮ್ಯಾನೇಜರ್ ಜೋ ಪಿನೇದತ್, ಲುಲು ಮಾಲ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಜಯೇಶ್ ನಾಯರ್, ಆಪರೇಷನ್ ಮ್ಯಾನೇಜರ್ ಒ. ಸುಕುಮಾರನ್ ಮತ್ತಿತರರು ಉಪಸ್ಥಿತರಿದ್ದರು.