ಲಕ್ನೋ: ಉತ್ತರ ಪ್ರದೇಶದ ಲಲಿತಪುರ್ ಬಳಿಯ ಗೋಧಿ ಹೊಲವೊಂದರಲ್ಲಿ ಪತ್ತೆಯಾಗಿದ್ದ 12 ಅಡಿ ಉದ್ದದ ಬೃಹತ್ ಮೊಸಳೆಯನ್ನು ರಕ್ಷಿಸಲಾಗಿದೆ.
ಗೋಧಿ ಹೊಲಕ್ಕೆ ಮೊಸಳೆ ಬಂದಿರುವುದನ್ನು ಸ್ಥಳೀಯರು ಅರಣ್ಯ ಇಲಾಖೆಗೆ ತಿಳಿಸಿದ್ದರು.
ಆದರೆ, ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದಿದ್ದು ಜೆಸಿಬಿ ತೆಗೆದುಕೊಂಡು.
ಮೊದಲು ಹಗ್ಗದಿಂದ ಬೃಹತ್ ಮೊಸಳೆಯನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ. ಆದರೆ, ಅದು ಸಾದ್ಯವಾಗಿಲ್ಲ.
ಕೊನೆಗೆ ಜೆಸಿಬಿ ಯಂತ್ರ ಬಳಸಿ ಬೃಹತ್ ಮೊಸಳೆಯನ್ನು ಒಂದೇ ಯತ್ನದಲ್ಲಿ ಟ್ರ್ಯಾಕ್ಟರ್‌ಗೆ ಎಸೆಯಲಾಗಿದೆ.ಈ ವೇಳೆ ಜೆಸಿಬಿಯ ಸಲಕರಣೆಯ ಕಬ್ಬಿಣದ ಹಲ್ಲುಗಳು ಮೊಸಳೆಗೆ ತಾಗಿ ಗಾಯವಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಇದರಿಂದ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ. ವನ್ಯಪ್ರಾಣಿಗಳನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ಅರಣ್ಯ ಇಲಾಖೆಗೆ ಗೊತ್ತಿಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಇದರಿಂದ ಉತ್ತರ ಪ್ರದೇಶದ ಅರಣ್ಯ ಇಲಾಖೆ ವಿರುದ್ಧ ಟೀಕೆ ಕೇಳಿ ಬಂದಿದೆ.