ನವದೆಹಲಿ: ಹೋಳಿಗೆ ಮುನ್ನ ಮಾರ್ಚ್ 13ರಂದು ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪ ನಡೆಯುವುದಿಲ್ಲ. ಈ ಬಗ್ಗೆ ಎರಡೂ ಸದನಗಳ ವ್ಯವಹಾರ ಸಲಹಾ ಸಮಿತಿ ನಿರ್ಧಾರ ತೆಗೆದುಕೊಂಡಿವೆ. ಹೋಳಿ ಪ್ರಯುಕ್ತ ಎರಡೂ ಸದನಗಳು ಈಗಾಗಲೇ 2025ರ ಮಾರ್ಚ್ 14ರಂದು ರಜೆ ಘೋಷಿಸಿವೆ.
ರಾಜ್ಯಸಭೆಯ ಕಾರ್ಯದರ್ಶಿ ಹೊರಡಿಸಿದ ಬುಲೆಟಿನ್ ಪ್ರಕಾರ, ವ್ಯವಹಾರ ಸಲಹಾ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದ್ದು 2025ರ ಮಾರ್ಚ್ 13ರಂದು ನಿಗದಿಯಾಗಿದ್ದ ರಾಜ್ಯಸಭೆಯ ಕಲಾಪವನ್ನು ರದ್ದುಗೊಳಿಸಲಾಗಿದೆ ಎಂದು ಸದಸ್ಯರಿಗೆ ತಿಳಿಸಲಾಗಿದೆ.
ಇನ್ನು ಲೋಕಸಭೆಯ ವ್ಯವಹಾರ ಸಲಹಾ ಸಮಿತಿಯು ಮಾರ್ಚ್ 13ರಂದು ಸದನದ ಕಲಾಪವನ್ನು ರದ್ದುಗೊಳಿಸಲು ನಿರ್ಧರಿಸಿರುವುದರಿಂದ ಅದನ್ನು ಸರಿದೂಗಿಸಲು ಮಾರ್ಚ್ 29ರ ಶನಿವಾರ ಲೋಕಸಭೆ ಸಭೆ ಸೇರಬೇಕೆಂದು ಶಿಫಾರಸು ಮಾಡಿದೆ.