ಬದಿಯಡ್ಕ: 'ಮಹಾ ಶ್ರೀಚಕ್ರ ನವಾವರಣ ಪೂಜೆ ಮಾ. 14ರಂದು ಎಡನೀರು ಮಠದಲ್ಲಿ ಜರುಗಲಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಪೂಜೆ ನೆರವೇರಿಸುವರು.
ಅಂದು ಬೆಳಗ್ಗೆ 11ಕ್ಕೆ ಕೊಲ್ಲೂರಿನ ವೇದಮೂರ್ತಿ ನರಸಿಂಹ ಅಡಿಗ ಅವರ ಪೌರೋಹಿತ್ಯದಲ್ಲಿ ಚಂಡಿಕಾ ಹವನ ನಡೆಯುವುದು. ಸಂಜೆ 6ಕ್ಕೆ ಅಷ್ಟಾವಧಾನ ನಡೆಯುವುದು. ಸುಬ್ರಹ್ಮಣ್ಯ ಕಾರಂತ ಅವರು ಪ್ರಸ್ತುತಪಡಿಸುವರು.