ಕಾಸರಗೋಡು: ಕೇರಳ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ 'ವಿಜ್ಞಾನ ಕೇರಳ' ಯೋಜನೆಯ ಅಂಗವಾಗಿ ಅಸಾಪ್ ಕೇರಳ ಮತ್ತು ಲಿಂಕ್ ಅಕಾಡೆಮಿಯ ನೇತೃತ್ವದಲ್ಲಿ ಮಾ. 15 ರಂದು ಕಾಸರಗೋಡು ಅಸಾಪ್ ಕಮ್ಯುನಿಟಿ ಸ್ಕಿಲ್ ಪಾರ್ಕ್‍ನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಪ್ರಮುಖ ಕಂಪನಿಗಳು ಭಾಗವಹಿಸಲಿದ್ದು ವಿವಿಧ ಕ್ಷೇತ್ರಗಳ ಅನೇಕ ಉದ್ಯೋಗವಕಾಶಗಳು ಉದ್ಯೋಗಾರ್ಥಿಗಳಿಗೆ ಲಭಿಸುವುದು. ಆಸಕ್ತ ಉದ್ಯೋಗಾರ್ಥಿಗಳು ಅಂದು ಬೆಳಗ್ಗೆ 9.30 ಕ್ಕೆ ಬಯೋಡೇಟಾ ಮತ್ತು ಸಂಬಂಧಿತ ಪ್ರಮಾಣಪತ್ರಗಳ ಸಹಿತ ಕಾಸರಗೋಡು ವಿದ್ಯಾನಗರದ ಕಮ್ಯುನಿಟಿ ಸ್ಕಿಲ್ ಪಾರ್ಕ್‍ಗೆ ಹಾಜರಾಗಬೇಕು. ಉದ್ಯೋಗಾರ್ಥಿಗಳಿಗೆ ಈ ಅವಕಾಶವನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆದುಕೊಳ್ಳಬಹುದು. ನೋಂದಣಿಗಾಗಿ 8590159452 ಅಥವಾ 9447326319 ಎಂಬ ನಂಬರಿಗೆ 'JOBFAIR' ಎಂದು ವಾಟ್ಸಾ ಆಪ್ ಮಾಡಬಹುದು.