ತಿರುವನಂತಪುರಂ: ಪೃಥ್ವಿರಾಜ್ ನಿರ್ದೇಶನದ 'ಎಂಬುರಾನ್' ಚಿತ್ರದಲ್ಲಿ ಕೋಮು ಗಲಭೆಗಳು ಸೇರಿದಂತೆ ಹಲವಾರು ವಿವಾದಾತ್ಮಕ ವಿಷಯಗಳನ್ನು ಪಕ್ಷಪಾತದಿಂದ ಚಿತ್ರಿಸಲಾಗಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ, ಚಿತ್ರದಲ್ಲಿ ಬದಲಾವಣೆ ತರುವಂತೆ ನಿರ್ಮಾಪಕರು ಮನವಿ ಮಾಡಿದ್ದಾರೆ.
ಇದಕ್ಕಾಗಿ ಗೋಕುಲಂ ಮೂವೀಸ್ ಪ್ರಾದೇಶಿಕ ಸೆನ್ಸಾರ್ ಮಂಡಳಿಯನ್ನು ಸಂಪರ್ಕಿಸಿತು. ಸೆನ್ಸಾರ್ ಮಂಡಳಿ ಸಭೆ ಸೇರಿ ದೂರುಗಳನ್ನು ಎತ್ತಿದ ಭಾಗಗಳನ್ನು ತೆಗೆದುಹಾಕಲು ಪ್ರಾರಂಭಿಸಿದೆ. ತಿದ್ದುಪಡಿಗಳನ್ನು ಹದಿನೇಳು ಭಾಗಗಳಲ್ಲಿ ಮಾಡಲಾಗುವುದು. ಕೆಲವು ವಿವಾದಾತ್ಮಕ ಸಂಭಾಷಣೆಗಳನ್ನು ಮೌನಗೊಳಿಸಲಾಗುತ್ತದೆ ಅಥವಾ ಸಂಪೂರ್ಣ ತೆಗೆದುಹಾಕಲಾಗುತ್ತದೆ.
ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಚಿತ್ರೀಕರಣಗೊಂಡು ಬಿಡುಗಡೆಯಾದ ಈ ಚಿತ್ರದ ವಿರುದ್ಧ ಪ್ರಮುಖ ದೂರುಗಳು ಮತ್ತು ಟೀಕೆಗಳು ಬಂದವು. ಗೋಧ್ರಾದಲ್ಲಿ ನಡೆದ ರೈಲು ದಾಳಿ ಮತ್ತು ರಾಮ ಭಕ್ತರ ಹತ್ಯಾಕಾಂಡವನ್ನು ಚಿತ್ರಸಲಾಗಿದ್ದು, ಅವನ್ನು ತೆಗೆದುಹಾಕಲಾಗುವುದು. ಅತ್ಯಾಚಾರದ ದೃಶ್ಯ ಮತ್ತು ಕೇಂದ್ರ ಗೃಹ ಸಚಿವರನ್ನು ಉಲ್ಲೇಖಿಸುವ ವಿವಾದಾತ್ಮಕ ದೃಶ್ಯವನ್ನು ಬದಲಾಯಿಸಲಾಗುವುದು. ಚಿತ್ರದಲ್ಲಿನ ಖಳನಾಯಕನ ಹೆಸರು ಬಜರಂಗಿ ಎಂಬುದನ್ನೂ ಬದಲಾಯಿಸಲು ನಿರ್ಮಾಪಕರು ಸ್ವತಃ ನಿರ್ಧರಿಸಿದ್ದಾರೆ.
ಈ ಬದಲಾವಣೆಗೊಂಡ ಚಿತ್ರ ಸೋಮವಾರ ಅಥವಾ ಮಂಗಳವಾರ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಅದು ವರೆಗೆ ಈಗಿನ ಮೂಲ ಚಿತ್ರವನ್ನೇ ಥಿಯೆಟರ್ ಗಳಲ್ಲಿ ಪ್ರದರ್ಶಿಸುವುದು ಮುಂದುವರಿಯಲಿದೆ.
ಚಿತ್ರದ ಬಗ್ಗೆ ಆರ್.ಎಸ್.ಎಸ್.-ಹಿಂದೂ ಸಂಘಟನೆಗಳು-ಬಿಜೆಪಿ ತೀವ್ರ ಪ್ರತಿರೋಧವನ್ನು ನೇರವಾಗಿಯಲ್ಲವಾದರೂ ಗೌಪ್ಯವಾಗಿ ಹೊರಹಾಕಿದ್ದವು. ಜೊತೆಗೆ ಸಂಘದ ಮುಖವಾಣಿಯ ಈ ವಾರದ ಆರ್ಗನೈಸರಲ್ಲಿ ತೀತ್ರ ಟೀಕೆಯ ವಿಮರ್ಶೆ ಬರೆದು ಚಿತ್ರವನ್ನು ಖಂಡಿಸಲಾಗಿದೆ.