ಕಾಸರಗೋಡು: ಮೊಗ್ರಾಲ್‍ಪುತ್ತೂರು ಪರಿಸರದಲ್ಲಿ ತಂಡವೊಂದು ಕಾರನ್ನು ತಡೆದು ನಿಲ್ಲಿಸಿ ಮಂಗಳೂರು ಕೋಟೆಕ್ಕಾರು ಕೊಲ್ಯ ನಿವಾಸಿ ಮುಹಮ್ಮದ್ ಮುಫೀದ್(31) ಅವರಿಗೆ ಹಲ್ಲೆ ಮಾಡಿ, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲೆತ್ನಿಸಿದ ಪೋಲೀಸರಿಗೂ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 20 ಮಂದಿ ವಿರುದ್ಧ ಪೋಲೀಸರು ಕೇಸು ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ನಾಲ್ವರನ್ನು ಪೋಲೀಸರು ಬಂಧಿಸಿದ್ದಾರೆ. ಪೆÇಲೀಸ್ ಜೀಪಿನಲ್ಲಿದ್ದ ಸಿವಿಲ್ ಪೋಲೀಸ್ ಆಫೀಸರ್ ನಿವಿಲಿ(35) ಅವರಿಗೆ ಹಲ್ಲೆ ಮಾಡಲಾಗಿದೆ. ಕಾರಿನಲ್ಲಿದ್ದ 10 ಸಾವಿರ ರೂ. ಅಪಹರಿಸಿದ್ದಾಗಿ ಮುಹಮ್ಮದ್ ಮುಫೀದ್ ಆರೋಪಿಸಿದ್ದಾರೆ.
ಕಾರು ತಡೆದು ನಿಲ್ಲಿಸಿ ಯುವಕ, ಪೋಲೀಸರಿಗೆ ಹಲ್ಲೆ : 20 ಮಂದಿ ವಿರುದ್ಧ ಕೇಸು ದಾಖಲು
0
ಮಾರ್ಚ್ 18, 2025