ಮಂಜೇಶ್ವರ: ಶ್ರೀ ಕಡಂಗಲ್ಲಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ನೂಜಿ ಅಂಗನಿಮಾರು ಶ್ರೀ ದೈವಗಳ ವರ್ಷಾವಧಿ ನೇಮೋತ್ಸವ ಮಾ. 21,22 ರಂದು ಜರಗಲಿದೆ. ಮಾರ್ಚ್ 21 ರಂದು ಶ್ರೀ ದೈವಗಳ ಪ್ರತಿಷ್ಠಾ ದಿನಾಚರಣೆ ಅಂಗವಾಗಿ ಬೆಳಗ್ಗೆ 8.30 ರಿಂದ ಮಹಾಗಣಪತಿ ಹೋಮ, ಕಲಶಾಭಿಷೇಕ, ನಾಗದೇವರಿಗೆ ತಂಬಿಲ, ತಂಬಿಲ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮಾರ್ಚ್ 22 ರಂದು ಬೆಳಗ್ಗೆ 9 ರಿಂದ ಶ್ರೀ ಕಡಂಗಲ್ಲಾಯ ಮತ್ತು ಬಂಟ ದೈವಗಳ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ರಿಂದ ಅಂಗನವಾಡಿ ಮಕ್ಕಳ ನೃತ್ಯ, 2024 ನೇ ಸಾಲಿನ ಅತ್ಯುತ್ತಮ ಅಂಗನವಾಡಿ ಶಿಕ್ಷಕಿ ರಾಜ್ಯ ಪ್ರಶಸ್ತಿ ಪಡೆದ ವಿಶಾಲಾಕ್ಷಿ ಅಡೇಕಳಕಟ್ಟೆರವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಸಂತೋಷ್ ಕಲಾವಿದೆರ್ ಪಾವಳ, ವರ್ಕಾಡಿ ಅಭಿನಯದ ತುಳುನಾಟಕ ಪ್ರದರ್ಶನ ನಡೆಯಲಿದೆ. ರಾತ್ರಿ 9 ರಿಂದ ಭಂಡಾರ ಏರುವುದು, ಅನ್ನಸಂತರ್ಪಣೆ ನಂತರ ಕುಪ್ಪೆ ಪಂಜುರ್ಲಿ ಮತ್ತು ಗುಳಿಗ ದೈವಗಳ ಕೋಲ ಜರಗಲಿದೆ.
ನೂಜಿ ಅಂಗನಿಮಾರು ಶ್ರೀ ಕಡಂಗಲ್ಲಾಯ ಮತ್ತು ಪರಿವಾರ ದೈವಗಳ ವμರ್Áವಧಿ ನೇಮೋತ್ಸವ ಮಾರ್ಚ್ 21,22 ರಂದು
0
ಮಾರ್ಚ್ 21, 2025
Tags