ಮಧೂರು: ಕುಂಬಳೆ ಸೀಮೆಯ ಇತಿಹಾಸಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಮಾ 27ರಿಂದ ಏ. 7ರ ವರೆಗೆ ನಡೆಯಲಿದ್ದು, ಸಿದ್ಧತಾ ಕಾರ್ಯ ಪೂರ್ತಿಗೊಂಡಿರುವುದಾಗಿ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಕೆ. ಗಿರೀಶ್ ಸಂಧ್ಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಲಬಾರ್ ದೇವಸ್ವಂ ಮಂಡಳಿ ಮೂಲಕ ರಚಿಸಲಾಗಿರುವ ಪುನ:ನವೀಕರಣ ಸಮಿತಿ ನೇತೃತ್ವದಲ್ಲಿ ರಚಿಸಲಾಗಿರುವ ಬ್ರಹ್ಮಕಲಶೋತ್ಸವ ಸಮಿತಿ ಮೇಲ್ನೋಟದಲ್ಲಿ 10ಕೋಟಿಗೂ ಹೆಚ್ಚು ಮೊತ್ತದಲ್ಲಿ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವಾ ಕಾರ್ಯಕ್ರಮ ನಡೆಯಲಿದೆ. ದೇವಾಲಯಯದ ಪುನ:ನವೀಕರಣ, ಉಪದೇವತೆಗಳ ಗುಡಿ, ಸುತ್ತುಪೌಳಿ, ಶಿಲಾಮಯ ಗುಡಿಗಳ ನಿರ್ಮಾಣಕಾರ್ಯಗಳಿಗಾಗಿ ಇದುವರೆಗೆ 25ಕೋಟಿಗೂ ಹೆಚ್ಚು ಮೊತ್ತ ವ್ಯಯಿಸಲಾಗಿದೆ. ಒಂದುವರೆ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ಭಕ್ತಾದಿಗಳ ವಾಹನ ನಿಲುಗಡೆಗಾಗಿ ಮಧೂರು, ಕೊಲ್ಯ, ಚೇನಕ್ಕೋಡು, ಅರಿಕ್ಕಳ ಪ್ರದೇಶದಲ್ಲಿ ಸೌಕರ್ಯ ಒದಗಿಸಲಾಗಿದೆ. ಒಟ್ಟು ನಾಲ್ಕು ವೇದಿಕೆಗಳಿದ್ದು, ನಿರಂತರ ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ದೇವಾಲಯದ ಎದುರುಭಾಗದ ವೇದಿಕೆಯಲ್ಲಿ ನಿರಂತರ ಭಜನೆ ನಡೆಯಲಿದೆ. ದೇವಾಲಯದ ಈಶಾನ್ಯ ಭಾಗದ ಕೊಲ್ಯ ಬಯಲಿನಲ್ಲಿ ಎರಡು ವೇದಿಕೆ, ಪಾಕಶಾಲೆ, ಉಗ್ರಾಣ, ಪ್ರಸಾದ ಭೋಜನ ವಿತರಣೆಯಾಗಲಿದೆಗಿನ್ನು ದೇವಾಳಯದ ತೆಂಕು ಭಾಗದ ಪದಾರ್ಥಿ ಬಯಲಿನಲ್ಲಿ ಒಂದು ವಏದಿಕೆ, ಊಟದ ವ್ಯವಸ್ಥೆ, ಪಾಕಶಾಲೆ ಕಾರ್ಯಾಚರಿಸಲಿದೆ.
ದೇವಾಲಯದ ಎದುರು ನಿರ್ಮಾಣಗೊಳ್ಳುತ್ತಿರುವ ಸಂಪೂರ್ಣ ಶಿಲಾಮಯ ರಾಜಗೋಪುರ ಹಾಗೂ ರಾಜಾಂಗಣದ ಉದ್ಘಾಟನೆಯನ್ನು ಮಾ 26ರಂದು ಬೆಳಗ್ಗೆ 10ಕ್ಕೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯಸಚಿವ ಸುರೇಶ್ ಗೋಪಿ ನೆರವೇರಿಸುವರು.
27ರಂದು ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಗೆ ಚಾಲನೆ ನೀಡಲಾಗುವುದು. ಅಂದು ಬೆಳಗ್ಗೆ 8ಕ್ಕೆ ತಂತ್ರಿವರ್ಯರಿಗೆ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, 9.30ಕ್ಕೆ ಪ್ರಧಾನ ವೇದಿಕೆಯಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯುವುದು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಉಡುಪಿ ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡುವರು.
30ರಂದು ಬೆಳಗ್ಗೆ 9ಕ್ಕೆ ಶ್ರೀ ಮದನಂತೇಶ್ವರ ದೇವರ ಪ್ರಾಸಾದಕ್ಕೆ ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಅಷ್ಟಬಂಧ ಪ್ರತಿಷ್ಠೆ ನಡೆಯುವುದು. ಏ. 2ರಂದು ಬೆಳಗ್ಗೆ 7ಕ್ಕೆ ಬ್ರಹ್ಮಕಲಶಾಭಿಷೇಕ ಆರಂಭಗೊಳ್ಳುವುದು. ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ ನಡೆಯುವುದು. ಏ. 5ರಂದು 128ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಮೂಡಪ್ಪ ಸೇವೆಯ ಅರಿಕೊಟ್ಟಿಗೆ ಮುಹೂರ್ತ, ಮಧ್ಯಾಹ್ನ ಅಪ್ಪ ತಯಾರಿ ಆರಂಭ, ರಾತ್ರಿ 10ಕ್ಕೆ ಮಹಾಮೂಡಪ್ಪಾಧಿವಾಸ ಹೋಮ, 11ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಮಹಾಮೂಡಪ್ಪ ಸಮರ್ಪಣೆ, 6ರಂದು ಬೆಳಗ್ಗೆ 6.20ಕ್ಕೆ ಕವಾಟೊದ್ಘಾಟನೆ, ಬೊಡ್ಡಜ್ಜ ಮಧೂರು ಶ್ರೀ ಸಿದ್ಧಿವಿನಾಯಕ ದೇವರ ದಿವ್ಯ ದರ್ಶನ, ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯುವುದು. 7ರಂದು ಸಮಾರೋಪ ಸಮಾರಂಭ ನಡೆಯುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ನಾರಾಯಣಯ್ಯ ಮಧೂರು, ರಾಜೀವನ್ ನಂಬ್ಯಾರ್, ರಂಜಿತ್ ಮನ್ನಿಪ್ಪಾಡಿ ಉಪಸ್ಥಿತರಿದ್ದರು.
ಇಬ್ಬರೂ ತಂತ್ರಿಗಳಿಂದ ತಂತ್ರಿಕ ವಿಧಿ ವಿಧಾನ:
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಾ ಕಾರ್ಯಕ್ರಮಗಳನ್ನು ತಂತ್ರಿವರ್ಯರಾದ ಬ್ರಹ್ಮಶ್ರೀ ಡಾ. ದೇರೆಬೈಲು ಶಿವಪ್ರಸಾದ ತಂತ್ರಿ ಹಾಗೂ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ನೆರವೇರಿಸಲಿದ್ದಾರೆ. ಡಾ. ದೇರೆಬೈಲ್ ಶಿವಪ್ರಸಾದ ತಂತ್ರಿ ಬ್ರಹ್ಮಕಲಶೋತ್ಸವ ಮತ್ತು ಉಳಿಯತ್ತಾಯ ವಿಷ್ಣು ಆಸ್ರ ಅವರು ಮೂಡಪ್ಪ ಸೇವೆಯ ತಾಂತ್ರಿಕ ವಿಧಿ ವಿಧಾನದ ನೇತೃತ್ವ ವಹಿಸುವರು.