ಒಟ್ಟಾವ: ಕೆನಡಾದಲ್ಲಿ ಏಪ್ರಿಲ್ 28ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಪ್ರಧಾನಿ ಮಾರ್ಕ್ ಕಾರ್ನಿ ಭಾನುವಾರ ಘೋಷಿಸಿದ್ದಾರೆ.
'ಹಾಲಿ ಸಂಸತ್ತನ್ನು ವಿಸರ್ಜಿಸಿ ಏಪ್ರಿಲ್ 28ಕ್ಕೆ ಚುನಾವಣೆ ನಡೆಸಬೇಕೆಂದು ಗವರ್ನರ್ ಜನರಲ್ ಅವರನ್ನು ವಿನಂತಿಸಿದ್ದೇನೆ.
ಅವರು ಅದಕ್ಕೆ ಒಪ್ಪಿದ್ದಾರೆ' ಎಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ತಿಳಿಸಿದ್ದಾರೆ.
ನಿಗದಿತ ವೇಳಾಪಟ್ಟಿಯಂತೆ ಸಾರ್ವತ್ರಿಕ ಚುನಾವಣೆ ಅಕ್ಟೋಬರ್ 20ರ ಬಳಿಕ ನಡೆಯಬೇಕಿತ್ತು. ಆದರೆ ಈ ಬಾರಿ ಅವಧಿಗೂ ಮುನ್ನ ಚುನಾವಣೆ ನಡೆಯಲಿದೆ.