ಇಸ್ಲಾಮಾಬಾದ್: ಕರಾಚಿಯಲ್ಲಿ 29 ವರ್ಷದ ವ್ಯಕ್ತಿಗೆ ಎಂಪಾಕ್ಸ್ (ಮಂಕಿ ಪಾಕ್ಸ್) ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು, ಪಾಕಿಸ್ತಾನದಲ್ಲಿ ಪತ್ತೆಯಾದ ಎರಡನೇ ಪ್ರಕರಣ ಎಂದು ಮಾಧ್ಯಮ ವರದಿ ತಿಳಿಸಿದೆ.
ಶಾ ಲತೀಫ್ ಪಟ್ಟಣದ ನಿವಾಸಿಯಾಗಿರುವ ರೋಗಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚರ್ಮದ ಅಲರ್ಜಿ ಚಿಕಿತ್ಸೆಗೆ ಎರಡು ದಿನದ ಹಿಂದೆ ಆಸ್ಪತ್ರೆಗೆ ಬಂದಿದ್ದರು. ತಪಾಸಣೆಯಲ್ಲಿ ಎಂಪಾಕ್ಸ್ ಇರುವುದು ಪತ್ತೆಯಾಗಿದೆ. ಸಿಂಧ್ ಪ್ರಾಂತ್ಯದಲ್ಲಿ ದಾಖಲಾಗಿರುವ ಮೊದಲ ಪ್ರಕರಣ ಇದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.