ಕುಂಬಳೆ: ಕುಂಬಳೆ ಸೀಮೆಯ ನಾಲ್ಕು ದೈವಸ್ಥಾನಗಳಲ್ಲೊಂದಾದ ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವರ್ಷಾವಧಿ ಜಾತ್ರೆ ಹಾಗೂ ಬಂಡಿ ಉತ್ಸವವು ಮಾರ್ಚ್ 30ರಿಂದ ಏಪ್ರಿಲ್ 4ರ ವರೆಗೆ ಜರುಗಲಿದೆ. ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರ ಅವರ ದಿವ್ಯಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯುವುದು.
ಮಾರ್ಚ30ರಂದು ಸಂಜೆ 4 ಗಂಟೆಗೆ ಕೋಟೆಕುಂಜ ಮಾಳ್ಯ ಮೂಲಸ್ಥಾನದಿಂದ ಶ್ರೀಪೂಮಾಣಿ ಕಿನ್ನಿಮಾಣಿ ದೈವಗಳ ಕೀರ್ವಾಳು ಆಗಮಿಸುವುದು, 7.30ಕ್ಕೆ ತಂತ್ರಿವರ್ಯರು ಧ್ವಜಾರೋಹಣ, ತಂಬಿಲ ಮತ್ತು ಮಹಾ ಪೂಜೆ ನಡೆಯುವುದು.
ಮಾರ್ಚ್ 31ರಂದು ರಾತ್ರಿ 6.30ರಿಂದ ಶಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಯಕ್ಷಾನುಗ್ರಹ ಶಿರಿಬಾಗಿಲು ಇದರ ಬಾಲಕಲಾವಿದರಿಂದ ನರಕಾಸುರ ಮೋಕ್ಷ ಎಂಬ ಯಕ್ಷಗಾನ ಬಯಲಾಟ ಸೇವೆ ಬಳಿಕ, ಶ್ರೀರಾಮ ಯಕ್ಷಗಾನ ಕಲಾಸಂಘ ಬೆದ್ರಡ್ಕ ಇದರ ಕಲಾವಿದರಿಂದ ಶ್ರೀ ಗಣಪತಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಸೇವೆ ನಡೆಯಲಿದೆ. ರಾತ್ರಿ ಗಂಟೆ 9ಕ್ಕೆ ಕೊಟ್ಯತ್ತಾಯನ ತಂಬಿಲ ಮತ್ತು ಮಹಾಪೂಜೆ ನಡೆಯಲಿದೆ.
ಏಪ್ರಿಲ್ 1ರಂದು ಮಧ್ಯಾಹ್ನ 1 ಗಂಟೆಗೆ ಶ್ರೀ ಕಿನ್ನಿಮಾಣಿ ದೈವದ ನೇಮೋತ್ಸವ, ಸಂಜೆ 7ರಿಂದ 8 ರ ವರೆಗೆ ಶ್ರೀ ಬಾಲಕೃಷ್ಣ ದೇವಾಡಿಗ ಬೆದ್ರಡ್ಕ ಮತ್ತು ಬಳಗದವರಿಂದ ಸ್ಯಾಕ್ಸೋ ಫೆÇೀನ್ ವಾದನ ಸೇವೆ ಹಾಗೂ ಗಂಟೆ 8ರಿಂದ 9ರ ವರೇಗೆ ಶ್ರೀ ಚಾಮುಂಡೇಶ್ವರೀ ಕುಣಿತ ಭಜನಾಸಂಘ ದೊಡ್ಡ ಹಿತ್ಲು ಇವರಿಂದ ಕುಣಿತ ಭಜನೆ, ರಾತ್ರಿ 9ರಿಂದ ಸನಾತನ ಬಾಲಗೋಕುಲ ಬೆದ್ರಡ್ಕ ಮತ್ತು ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 11ಕ್ಕೆ ಪಾಪೆ ಬಂಡಿ ಉತ್ಸವ, ಬಂಡಿಕಾಣಿಕೆ, ತಂಬಿಲ ಮಹಾ ಪೂಜೆ ನಡೆಯಲಿದೆ.
ಏಪ್ರಿಲ್ 2ರಂದು ಮಧ್ಯಾಹ್ನ 1 ಗಂಟೆಗೆ ಶ್ರಿ ಪೂಮಾಣಿ ದೈವದ ನೇಮೋತ್ಸವ ನಡೆಯಲಿದ್ದು ಸಂಜೆ ಗಂಟೆ 7ರಿಂದ ಫ್ಯೂಷನ್ ತಿರುವಾದಿರ ಹಾಗೂ ಸಮೂಹ ನೃತ್ಯ, ರಾತ್ರಿ 8ಕ್ಕೆ ಕಣ್ಣೂರು ಶ್ರೀ ಬೀರ್ಣಾಳ್ವ ದೈವದ ಮೂಲಸ್ಥಾನದಿಂದ ನಂತರ ಪುತ್ತೂರುಕೊಟ್ಯ ಶ್ರೀ ಧೂಮಾವತೀ ದೈವಸ್ಥಾನದಿಂದ ಶ್ರೀ ಕ್ಷೇತ್ರಕ್ಕೆ ದೈವಗಳ ಭಂಡಾರವು ಮೆರವಣಿಗೆಯೊಂದಿಗೆ ಆಗಮಿಸಲಿದೆ. ರಾತ್ರಿ 9 ಗಂಟೆಗೆ ಡಾ.ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಘ ಕಾಸರಗೋಡು ಇವರಿಂದ ಸಾಹಿತ್ಯ ಗಾನ ನೃತ್ಯ ವೈಭವ, ರಾತ್ರಿ 11ಕ್ಕೆ ಪಾಪೆ ಬಂಡಿ ಉತ್ಸವ, ವಿಶೇಷ ಸಿಡಿಮದ್ದು ಪ್ರದರ್ಶನ ಬಂಡಿಕಾಣಿಕೆ, ತಂಬಿಲ ಮಹಾ ಪೂಜೆ ನಡೆಯಲಿದೆ.
ಏಪ್ರಿಲ್ 3ರಂದು ಮಧ್ಯಾಹ್ನ 1ಗಂಟೆಗೆ ಶ್ರೀ ಬೀರ್ಣಾಳ್ವ ದೈವದ ನೇಮೋತ್ಸವ, 3.30ಕ್ಕೆ ಶ್ರೀ ಧೂಮಾವತೀ ದೈವದ ನೇಮೋತ್ಸವ, ರಆಥ್ರಿ 9ಕ್ಕೆ ಮಂಗಳಸ್ನಾನ ಹಾಗೂ ತಂತ್ರಿವರ್ಯರಿಂದ ಧ್ವಜಾವರೋಹಣ, ತಂಬಿಲ ಮಹಾ ಪೂಜೆ ಹಾಗೂ ಅಯ್ಯಂಗಾಯಿ ನಡೆಯಲಿದೆ.