ಮಂಜೇಶ್ವರ: ಕರ್ನಾಟಕದ ಗಡಿಭಾಗದಲ್ಲಿರುವ 'ಮೂವರ್ ದೈಯೊಂಗುಳು' ಎಂದು ಭಕ್ತಿಯಿಂದ ಕರೆಯಲ್ಪಡುವ ಕೂಟತ್ತಜೆ ಕ್ಷೇತ್ರದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ ಮತ್ತು ತೋಡಕುಕ್ಕಿನಾರ್ ಪ್ರಧಾನ ದೈವಗಳಾಗಿ ಪರಿವಾರ ದೈವಗಳೊಂದಿಗೆ ಪುರಾತನ ಐತಿಹ್ಯ ಹೊಂದಿರುವ ಕೂಟತ್ತಜೆ ಕ್ಷೇತ್ರದ ಸ್ಥಾನ, ಮಾಡ ಮತ್ತು ಭಂಡಾರ ಮನೆಗಳು ಇದೀಗ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ದಗೊಂಡಿದ್ದು ಕ್ಷೇತ್ರ ವ್ಯಾಪ್ತಿಯ 'ಮೂಜಿ ಊರು ಐನ್ ಗ್ರಾಮ'ಗಳು ಭಕ್ತಿ ಸಂಭ್ರಮ ಮಾರ್ಚ್ 30ರಿಂದ ಏಪ್ರಿಲ್ 6ರತನಕ ವರ್ಕಾಡಿ ಹೊಸಮನೆ ಬ್ರಹ್ಮಶ್ರೀ ರಾಜೇಶ ತಾಳಿತ್ತಾಯ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಶೈಲೇಂದ್ರ ಭರತ ನಾಯ್ಕ್ ನಚ್ಚಗುತ್ತು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ ಮತ್ತು ಪರಿವಾರ ದೈವಗಳ ಪುನರ್ ಪ್ರತಿμÁ್ಠ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬುಧವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಮಾರ್ಚ್ 30ರಂದು ಮಧ್ಯಾಹ್ನ 3-30ಕ್ಕೆ ಹಸಿರು ಹೊರೆಕಾಣಿಕೆಯು ವಿವಿಧ ಪ್ರದೇಶಗಳಿಂದ ಸಂಗ್ರಹಗೊಂಡು ಮುಡಿಪು ಮುಡಿಪಿನ್ನಾರ್ ದೈವಸ್ಥಾನದಿಂದ ಹೂಹಾಕುವಕಲ್ಲು, ನಂದರಪದವು ಪ್ರದೇಶಗಳಲ್ಲಿ ಹಾದು ಕೂಟತ್ತಜೆ ಕ್ಷೇತ್ರ ತಲುಪಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು, ನಾಡಿನ ಪ್ರಸಿದ್ಧ ವ್ಯಕ್ತಿಗಳು, ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಲಿದ್ದಾರೆ. ಶ್ರೀ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳನ್ನು ಪ್ಲಾಸ್ಟಿಕ್ ಮುಕ್ತವಾಗಿ ಸ್ವಚ್ಛತೆಯಿಂದ ಪವಿತ್ರವಾಗಿ ನೆರವೇರಿಸಲು ಯೋಚಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭ ದೈವಸ್ಥಾನ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಕಾಶ್ ಪೆÇಯ್ಯತ್ತಬೈಲ್, ಸತೀಶ್ ಜೋಗಿ ಕೂಟತ್ತಜೆ, ಕಾಮಗಾರಿ ಅಭಿಯಂತರ ಸುರೇಶ್ ಕೊಂಡೆ ಕೂವೆತ್ತಬೈಲ್, ಪ್ರಧಾನ ಸಂಚಾಲಕ ನಂದರಾಜ್ ಶೆಟ್ಟಿ ಪಿಜಿನಬೈಲ್, ಕಾರ್ಯದರ್ಶಿ ಆನಂದ ಜೋಗಿ ಕೂಟತ್ತಜೆ, ಸಹಕೋಶಾಧಿಕಾರಿ ಉಗ್ಗಪ್ಪ ಮಾಣೈ ಬೀರೂರು, ಹರೀಶ್ ಜೋಗಿ ಮೊದಲಾದವರು ಉಪಸ್ಥಿತರಿದ್ದರು.
ಅಭಿಮತ:
'ಭಯ, ಭಕ್ತಿಯ ಕ್ಷೇತ್ರವಾಗಿದ್ದು ಪ್ರಶ್ನಾ ಚಿಂತನೆಯಲ್ಲಿ ಜೀರ್ಣೋದ್ಧಾರದ ಅನಿವಾರ್ಯತೆ ಕಂಡು ಬಂದಿದ್ದರಿಂದ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಕೆಲಸ ಕಾರ್ಯ ಭಾಗಶಃ ನಡೆದಿದೆ. ದೊಡ್ಡ ಮೊತ್ತ ಅವಶ್ಯಕತೆ ಇದ್ದ ಕಾರಣ ಕೆಲಸ ಪ್ರಾರಂಭಿಸಿದ ಬಳಿಕ ಊರ ಹಾಗೂ ಪರವೂರ ಜನರು ಸಹಕಾರ ನೀಡಿದ್ದಾರೆ. ಸ್ಥಳೀಯರು ಶ್ರಮಾದಾನದಲ್ಲಿ ತೊಡಗಿಸಿಕೊಂಡಿದ್ದಾರೆ'
-ರಾಧಾಕೃಷ್ಣ ರೈ ಉಮಿಯ, ಕೋಶಾಧಿಕಾರಿ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ