ಡಮಾಸ್ಕಸ್: ಕಳೆದೆರಡು ದಿನಗಳಲ್ಲಿ ಸಿರಿಯಾ ಭದ್ರತಾ ಪಡೆಗಳು ಹಾಗೂ ಸರ್ಕಾರ ಜೊತೆಗೆ ನಂಟು ಹೊಂದಿದ ಬಂದೂಕುಧಾರಿ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 340 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಸತ್ತವರಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಲಾವಿಟ್ ಸಮುದಾಯವರೇ ಹೆಚ್ಚಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ನಿಗಾ ಸಂಸ್ಥೆಯ ರಾಮಿ ಅಬ್ದುಲ್‌ರಹಮಾನ್ ಅವರು ಶನಿವಾರ 'ರಾಯಿಟರ್ಸ್' ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಸಾದ್ ಆಡಳಿತದಲ್ಲಿದ್ದ ಬಂಡುಕೋರರನ್ನು ಮಟ್ಟಹಾಕಲು ಸರ್ಕಾರ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ಜನರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಂತರಿಕ ಇಲಾಖೆ ಹೇಳಿಕೆ ಉಲ್ಲೇಖಿಸಿ ಸಿರಿಯಾದ ಮಾಧ್ಯಮಗಳು ವರದಿ ಮಾಡಿವೆ.