ನವದೆಹಲಿ: ಕೇರಳದಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರ ವೇತನವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ರಾಜ್ಯದಲ್ಲಿ ದಿನಗೂಲಿಯನ್ನು 23 ರೂ. ಹೆಚ್ಚಿಸಿ 369 ರೂ.ಗೆ ಏರಿಸಲಾಗಿದೆ.
ಇದರಿಂದ ಕಾರ್ಮಿಕರ ವೇತನ ರೂ.2,300ಗಳಷ್ಟು ಹೆಚ್ಚಾಗುತ್ತದೆ. ವರ್ಷಕ್ಕೆ 2,300 ರೂ.ವರೆಗೆ ಹೆಚ್ಚಿಸಲಾಗಿದೆ. ಗ್ರಾಹಕ ಬೆಲೆ ಸೂಚ್ಯಂಕದ ಪ್ರಕಾರ ಇದು ಪರಿಷ್ಕøತ ದರವಾಗಿದೆ. 2025-25ನೇ ಹಣಕಾಸು ವರ್ಷಕ್ಕೆ ದಿನಗೂಲಿಯನ್ನು ಎರಡರಿಂದ ಏಳೂವರೆ ಪ್ರತಿಶತzಷ್ಟು ಪರಿಷ್ಕರಿಸಲಾಗಿದೆ. ಅದರಂತೆ, ವಿವಿಧ ರಾಜ್ಯಗಳಿಗೆ ಬೆಲೆ 7 ರೂ.ನಿಂದ 26 ರೂ.ಗೆ ಹೆಚ್ಚಾಗುತ್ತದೆ. ಹರಿಯಾಣದಲ್ಲಿ, ಪ್ರಸ್ತುತ ಉದ್ಯೋಗ ಖಾತರಿಗಾಗಿ 374 ರೂ. ಪಾವತಿಸಲಾಗುತ್ತಿದೆ, ಹೊಸ ದರವು ದೈನಂದಿನ ಉದ್ಯೋಗ ಖಾತರಿ ವೇತನವನ್ನು 400 ರೂ.ಗಳಷ್ಟು ಹೆಚ್ಚಿಸಲಿದೆ.
ಏಳು ಕೋಟಿ ಜನಸಂಖ್ಯೆ ಹೊಂದಿರುವ ತಮಿಳುನಾಡು, ಉದ್ಯೋಗ ಖಾತರಿ ಯೋಜನೆಗೆ ಉತ್ತರ ಪ್ರದೇಶಕ್ಕಿಂತ ಹೆಚ್ಚಿನ ಕೇಂದ್ರ ನಿಧಿಯನ್ನು ಪಡೆಯುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಗಮನಾರ್ಹ. ಈ ವರ್ಷ ಇಲ್ಲಿಯವರೆಗೆ ಉದ್ಯೋಗ ಖಾತರಿ ಯೋಜನೆಗೆ 7,300 ಕೋಟಿ ರೂ.ಗಳನ್ನು ನೀಡಲಾಗಿದೆ. ಈ ವರ್ಷ ತಮಿಳುನಾಡಿಗೆ ಹತ್ತು ಸಾವಿರ ಕೋಟಿ ರೂಪಾಯಿ ನೆರವು ದೊರೆಯಲಿದೆ. ಇಪ್ಪತ್ತು ಕೋಟಿ ಜನಸಂಖ್ಯೆಯನ್ನು ಹೊಂದಿರುವ ಯುಪಿ ಕೂಡ ಅಷ್ಟೇ ಮೊತ್ತವನ್ನು ಪಡೆಯುತ್ತದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಚಂದ್ರಶೇಖರ್ ಪೆಮ್ಮಸಾನಿ ಹೇಳಿರುವರು.