ಇದಕ್ಕೂ ಮುನ್ನ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೊಳಿಸಲು ಮುಂದಾಗಿರುವ ಸುಂಕ ನೀತಿ ಬಗ್ಗೆ ಸೃಷ್ಟಿಯಾಗಿರುವ ಹೂಡಿಕೆದಾರರಲ್ಲಿನ ಕಳವಳದಿಂದಾಗಿ ಮಂಗಳವಾರ ಬೆಳಗ್ಗೆ ಅಮೆರಿಕ ಶೇರು ಮಾರುಕಟ್ಟೆಯಲ್ಲಿ ಮಹಾ ಪತನ ಸಂಭವಿಸಿದ್ದು, 4 ಟ್ರಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಕರಗಿ ಹೋಯಿತು. ಮುಂಬೈನ ದಲಾಲ್ ಬೀದಿಯಲ್ಲಿರುವ ಬಿಎಸ್‌ಇ ಶೇರು ಮಾರುಕಟ್ಟೆ ಮಂಗಳವಾರ ಬೆಳಗ್ಗೆ ದಿನದ ವಹಿವಾಟು ಆರಂಭಿಸುತ್ತಿದ್ದಂತೆ, ಅಮೆರಿಕದ ಈ ಚಂಚಲ ಶೇರು ಮಾರುಕಟ್ಟೆಯ ಬಿಸಿಯಿಂದಾಗಿ 450 ಅಂಕಗಳ ನಷ್ಟ ಅನುಭವಿಸಿ, ಮತ್ತೊಂದು ಮಹಾ ಪತನದ ಆತಂಕ ಸೃಷ್ಟಿಸಿತು. ಆದರೆ, ದಿನದ ವಹಿವಾಟು ಅಂತ್ಯಗೊಳ್ಳುವ ವೇಳೆಗೆ ಸಾಮಾನ್ಯ ಸ್ಥಿತಿಗೆ ಮರಳಿದ ಬಿಎಸ್‌ಇ, ಕೇವಲ 12.85 ಅಂಕಗಳ ನಷ್ಟ ಅನುಭವಿಸಿ, 74,102.32 ಅಂಕಗಳೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿತು.
ಮಂಗಳವಾರದ ದಿನದ ವಹಿವಾಟಿನಲ್ಲಿ ಬಿಎಸ್‌ಇ ಮಧ್ಯಮ ಗಾತ್ರದ ಸೂಚ್ಯಂಕವು ಶೇ. 0.7ರಷ್ಟು ಏರಿಕೆ ಕಂಡರೆ, ಸಣ್ಣ ಗಾತ್ರದ ಸೂಚ್ಯಂಕವು ಶೇ. 0.7ರಷ್ಟು ಇಳಿಕೆ ದಾಖಲಿಸಿತು. ಟ್ರೆಂಟ್, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್, ಶ್ರೀರಾಮ್ ಫೈನಾನ್ಸ್, ಬಿಪಿಸಿಎಲ್ ನಿಫ್ಟಿ ಮಾರುಕಟ್ಟೆಯಲ್ಲಿ ಲಾಭ ಗಳಿಸಿದ ಪ್ರಮುಖ ಕಂಪನಿಗಳಾದರೆ, ಇಂಡಸ್ ಇಂಡ್ ಬ್ಯಾಂಕ್, ಇನ್ಫೋಸಿಸ್, ಬಜಾಜ್ ಫಿನ್ ಸರ್ವ್, ಪವರ್ ಗ್ರಿಡ್ ಕಾರ್ಪೊರೇಷನ್ ಹಾಗೂ ಎಂ ಆಯಂಡ್ ಎಂ ನಷ್ಟಕ್ಕೀಡಾದ ಪ್ರಮುಖ ಕಂಪನಿಗಳು.
ಲೋಹ, ರಿಯಲ್ ಎಸ್ಟೇಟ್, ಟೆಲಿಕಾಂ, ತೈಲ ಮತ್ತು ಅನಿಲ ವಲಯಗಳು ಶೇ. 0.5-3ರಷ್ಟು ಏರಿಕೆ ಕಂಡರೆ, ಆಟೊಮೊಬೈಲ್, ಐಟಿ ಹಾಗೂ ಬ್ಯಾಂಕ್ ವಲಯಗಳು ಶೇ. 0.3-0.7ರಷ್ಟು ಇಳಿಕೆ ದಾಖಲಿಸಿದವು.