ಭುವನೇಶ್ವರ: ಒಂದು ತಿಂಗಳ ಗಂಡುಮಗುವಿನ ಕಾಯಿಲೆ ಗುಣವಾಗುತ್ತದೆ ಎಂಬ ಮೌಢ್ಯದಲ್ಲಿ ಕಾದ ಕಬ್ಬಿಣದಿಂದ 40 ಸಲ ಬರೆ ಎಳೆದ ಘಟನೆ ಒಡಿಶಾದ ನವರಂಗಪುರ ಜಿಲ್ಲೆಯಲ್ಲಿ ನಡೆದಿದೆ. ಇದಾದ ಬಳಿಕ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
'ಜಿಲ್ಲೆಯ ಚಂದಹಂಡಿ ಬ್ಲಾಕ್‌ನ ಗಂಬರಿಗುಡಾ ಪಂಚಾಯಿತಿಯ ಫುಂಡೆಲ್‌ಪಾಢ ಗ್ರಾಮದಲ್ಲಿ ಈ ಘಟನೆ ನಡೆದಿದೆ.
'ಕಾಯಿಲೆ ಉಲ್ಬಣಿಸಿದ್ದರಿಂದ, ಮಗುವನ್ನು ತಕ್ಷಣವೇ ಉಮರ್‌ಕೋಟ್ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಆರೋಗ್ಯ ಸ್ಥಿತಿ ಪರಿಶೀಲಿಸಿದ್ದು, ಸ್ಥಿರವಾಗಿದೆ. ಮಗುವಿನ ಹೊಟ್ಟೆ ಹಾಗೂ ಹಣೆಯ ಮೇಲೆ ಬರೆ ಹಾಕಲಾಗಿದೆ' ಎಂದು ನವರಂಗಪುರದ ಮುಖ್ಯ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್ ಪಾಂಡಾ ತಿಳಿಸಿದರು.
'ರಾಜ್ಯದ ಹಲವು ಗ್ರಾಮಗಳಲ್ಲಿ ಇಂತಹ ಬರೆ ಹಾಕುವ ಪದ್ಧತಿ ಇದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು' ಎಂದು ಸಂತೋಷ್ ಹೇಳಿದರು.