ಕಾಸರಗೋಡು: ಜಾಗದ ಸ್ಕೆಚ್ ನೀಡಲು ಒಂದು ಸಾವಿರ ರೂ. ಲಂಚ ಪಡೆದ ಗ್ರಾಮಾಧಿಕಾರಿಗೆ ತಲಶ್ಯೇರಿಯ ವಿಜಿಲೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ. ರಾಮಕೃಷ್ಣನ್ ಎರಡು ವರ್ಷ ಜೈಲು ಶಿಕ್ಷೆ ಮತ್ತು 40ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಲಾಗಿದೆ.
ಆದೂರು ಗ್ರೂಪ್ ವಿಲ್ಲೇಜ್ ಅಧಿಕಾರಿಯಾಘಿದ್ದ ಕೆ. ಅನಿಲ್‍ಕುಮಾರ್(47)ಶಿಕ್ಷೆಗೀಡಾದ ಅಧಿಕಾರಿ. ಅನಿಲ್ ಕುಮಾರ್ ಚೆಮ್ನಾಡ್ ಪರವನಡ್ಕ ನಿವಾಸಿ ಯಾಗಿದ್ದಾರೆ. 2013 ಅ. 21ರಂದು ಘಟನೆ ನಡೆದಿದೆ. ಉಮ್ಮರ್‍ಫಾರೂಕ್ ಎಂಬವರು ಜಾಗದ ಸ್ಕೆಚ್‍ಗಾಗಿ ಅರ್ಜಿ ಸಲ್ಲಿಸಿದ್ದು, ಸ್ಕೆಚ್ ನೀಡಲು ಒಂದುವರೆ ಸಾವಿರ ರೂ. ಬೇಡಿಕೆಯಿರಿಸಿದ್ದು, ನಂತರ ಒಂದು ಸಾವಿರ ರೂ. ಪಡೆದುಕೊಂಡಿರುವ ಬಗ್ಗೆ ವಿಜಿಲೆನ್ಸ್‍ನ ಅಂದಿನ ಡಿವೈಎಸ್‍ಪಿ ಕೆ. ದಾಮೋದರನ್ ಕೇಸು ದಾಖಲಿಸಿಕೊಂಡಿದ್ದರು.