ಮುಂಬೈ: ಜಾಗತಿಕ ಮನ್ನಣೆ ಪಡೆದಿರುವ ಆಲ್‌ಸ್ಟೋಮ್ ಕಂಪನಿಯು ಬಿಹಾರದ ಮಾಧೆಪುರದಲ್ಲಿರುವ ಘಟಕದಲ್ಲಿ ತನ್ನ 500ನೇ ವಿದ್ಯುತ್ ಚಾಲಿತ ಎಂಜಿನ್ ಅನ್ನು ಭಾರತೀಯ ರೈಲ್ವೆಗೆ ಹಸ್ತಾಂತರಿಸಿದೆ.
ಭಾರತೀಯ ರೈಲ್ವೆಯು ವ್ಯಾಗ್-12 ಬಿ ಎಂದು ಕರೆಯುವ ಈ ವಿದ್ಯುತ್ ಚಾಲಿತ ಎಂಜಿನ್‌ಗಳು ಗಂಟೆಗೆ 120 ಕಿ.ಮೀ.ವೇಗದಲ್ಲಿ 6 ಸಾವಿರ ಟನ್ ತೂಕದ ರೇಕ್‌ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿವೆ. ಸರಕು ಸಾಗಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ.
ಸರಕು ಸೇವೆಗಾಗಿ 12 ಸಾವಿರ ಎಚ್‌ಪಿ ಸಾಮರ್ಥ್ಯದ (9 ಮೆಗಾವಾಟ್), 800 ಹೈಪವರ್ಡ್ ಡಬಲ್ ಸೆಕ್ಷನ್ ಪ್ರೈಮಾ ಟಿ 8 ವಿದ್ಯುತ್ ಚಾಲಿತ ಎಂಜಿನ್‌ಗಳನ್ನು ಕಂಪನಿಯು ಪೂರೈಸುತ್ತಿದೆ. ಇದು ₹38,805 ಕೋಟಿ ಮೌಲ್ಯದ ಒಪ್ಪಂದದ ಭಾಗವಾಗಿದೆ.
ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ವಿದ್ಯುತ್ ಎಂಜಿನ್‌ನ ಹಸ್ತಾಂತರ ಕಾರ್ಯಕ್ರಮದಲ್ಲಿ ಆಲ್‌ಸ್ಟೋಮ್‌ನ ಮುಖ್ಯ ಆಡಳಿತಾಧಿಕಾರಿ ಮನೀಶ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು, ಭಾರತೀಯ ರೈಲ್ವೆಯ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.